ಅಫಜಲಪುರ: ತಾಲ್ಲೂಕಿನ ಉಡಚಣ ಗ್ರಾಮದ ಹಿರಿಯ ಮುಖಂಡ ಚಂದ್ರಶೇಖರ ಹಂಚನಾಳ (75) ಅವರು ಭಾನುವಾರ ನಿಧನರಾದರು.
ಅವರಿಗೆ ಪತ್ನಿ, ಮೂರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಸೋಮವಾರ (ಜುಲೈ 13) ಬೆಳಿಗ್ಗೆ 11 ಗಂಟೆಗೆ ನಗರದ ಗಂಜ್ ಪ್ರದೇಶದಲ್ಲಿರುವ ಶಿವಮುಕ್ತಿ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.