ಕಾಳಗಿ: ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದ ಪ್ರವಾಹಕ್ಕೆ ತೆಂಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರತಿ ಬಾರಿಯೂ ನೀರು ನುಗ್ಗಿ ಮುಳುಗಡೆಯಾಗುತ್ತಿದೆ. ಹೀಗಾಗಿ ಶಾಲಾ ಕಟ್ಟಡದ ಸುರಕ್ಷತೆ ಪ್ರಶ್ನೆಯಾಗಿದೆ.

ಜಲಾಶಯದ ಒಳಹರಿವು ಹೆಚ್ಚಿದ್ದಾಗ ಹೊರಗೆ ಬಿಡಲಾಗುವ ನೀರು ಹೆಬ್ಬಾಳ, ಕಣಸೂರ, ಮಲಘಾಣ, ಡೊಣ್ಣೂರ-ಕಲಗುರ್ತಿ, ತೆಂಗಳಿ ಹಳ್ಳದ ಮುಖಾಂತರ ಮಳಖೇಡದ ಕಾಗಿಣಾ ನದಿಗೆ ಸೇರಿಕೊಳ್ಳುತ್ತದೆ. ಮಾರ್ಗಮಧ್ಯೆ ಡೊಣ್ಣೂರ ಗ್ರಾಮಕ್ಕೆ ಸುತ್ತುವರಿಯುವ ನೀರು ಇಡಿ ಗ್ರಾಮವೇ ನಡುಗಡ್ಡೆಯನ್ನಾಗಿ ಮಾಡಿ ಪಕ್ಕದ ಸರ್ಕಾರಿ ಶಾಲಾ ಕಟ್ಟಡ ಆಕ್ರಮಿಸುತ್ತದೆ. ಪ್ರವಾಹ ಬರುವ ಮುಂಚೆ ಗೊತ್ತಾದರೆ ಶಿಕ್ಷಕರು ಶಾಲೆಯೊಳಗಿನ ಎಲ್ಲ ಸಾಮಗ್ರಿ ಮತ್ತು ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಇಡುತ್ತಾರೆ.

ರಜೆ ವೇಳೆ ಅಥವಾ ರಾತ್ರಿ ಸಮಯದಲ್ಲಿ ಬಂದರೆ ಯಾರೂ ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿ ಶಾಲೆ ನೀರೊಳಗೆ ಮುಳುಗುತ್ತದೆ. 1ರಿಂದ 7ನೇ ತರಗತಿವರೆಗಿನ 7ಕೊಠಡಿಗಳ ಶಾಲೆ ನೀರಿನ ಪ್ರವಾಹಕ್ಕೆ ಇತ್ತೀಚೆಗೆ ಅರ್ಧಭಾಗ ಮುಳುಗಿತು. ನೀರು ಒಳನುಗ್ಗಿ ಸುತ್ತುವರಿದಿದ್ದರಿಂದ ಶಾಲೆಯೊಳಗಿನ ವಸ್ತುಗಳು, ದಾಖಲೆಗಳು, ಆಹಾರಧಾನ್ಯ ಹಾಳಾಗಿರುವ ಸಂಭವವಿದೆ ಎನ್ನಲಾಗಿದೆ.

ಈ ಹಿಂದೊಮ್ಮೆ ನೀರಿಳಿದ ಮೇಲೆ ಕೆಸರು, ಕಸಕಡ್ಡಿ, ವಿಷಜಂತುಗಳು ಅಂಟಿಕೊಂಡಿದನ್ನು ಸ್ವಚ್ಛಗೊಳಿಸುವುದು ತುಂಬ ಕಷ್ಟದಾಯಕವಾಗಿತ್ತು ಎನ್ನುತ್ತಾರೆ ಮುಖ್ಯಶಿಕ್ಷಕರು.

ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಶಾಲಾ ಕಟ್ಟಡಕ್ಕೆ ಧಕ್ಕೆ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಅವಾಂತರ ಪದೇ ಪದೇ ಸಂಭವಿಸುತ್ತಿದ್ದು ಹಾಳಾಗುತ್ತಿರುವ ಶಾಲಾ ಸಂಕೀರ್ಣ ರಕ್ಷಿಸುವವರು ಯಾರು? ಶಾಲೆ ಬೇರೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿ ಮಕ್ಕಳ ಹಿತ ಕಾಪಾಡುವರು ಯಾರು? ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಏನು ಮಾಡಲಾಗುವುದಿಲ್ಲ. ಬೇರೆ ಸುರಕ್ಷಿತ ಜಾಗ ಸಿಕ್ಕರೆ ಶಾಲೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು
ಶಶಿಧರ ಬಿರಾದಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪುರ

ಶಾಲೆಯಷ್ಟೇ ಅಲ್ಲ ಇಡಿ ಗ್ರಾಮವೇ ಸ್ಥಳಾಂತರ ಮಾಡಲು ಎರಡು ಸಲ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ
ಪ್ರದೀಪ ಘಾಳೆನೋರ ಗ್ರಾಪಂ ಸದಸ್ಯ ಡೊಣ್ಣೂರ

ಮಕ್ಕಳ ದಾಖಲಾತಿ ಪುಸ್ತಕ ಮಾತ್ರ ಮನೆಗೆ ತಂದಿದ್ದೇನೆ ರಾತ್ರಿವೇಳೆ ನೀರುಬಂದಿದೆ ಶಾಲೆಯೊಳಗೆ ಹೋಗುವ ದಾರಿಯಲ್ಲಿ ಇನ್ನೂ ನೀರಿದೆ
ಮಲ್ಲಪ್ಪ ಬಿಟ್ಟಣ್ಣವರ್ ಶಾಲೆಯ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.