ಕಲಬುರಗಿ: ‘ದೇಶದ ಸ್ವಾತಂತ್ರ್ಯದ ನಂತರ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇರುವ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಈ ದೇಶ ಇರುವ ತನಕ ಮಹಾತ್ಮ ಗಾಂಧಿ ಹಾಗೂ ಡಾ.ಅಂಬೇಡ್ಕರ್ ಇರುತ್ತಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.

ನಗರದ ಶರಣ ಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ–75, ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು?’ ಪುಸಕ್ತ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಯೋಜನಾ ಸಚಿವನಾಗಬೇಕು, ಶೋಷಿತರನ್ನು ಮೇಲೆತ್ತಬೇಕೆಂಬ ಆಶಯ ಅಂಬೇಡ್ಕರ್ ಅವರದಾಗಿತ್ತು. ಕಾಲಕೂಡಿ ಬಂದು ಅಂಬೇಡ್ಕರ್ ದೇಶದ ಪ್ರಧಾನಿ ಆಗಿದ್ದರಂತೂ ಇಷ್ಟೊತ್ತಿಗೆ ಅಮೆರಿಕವನ್ನು ಭಾರತ ಹಿಂದಿಕ್ಕಿರುತ್ತಿತ್ತು. ಆಕಸ್ಮಿಕವಾಗಿ ಸರ್ದಾರ್ ವಲ್ಲಭಭಾಯಿ ಪಟೇಲರೇ ದೇಶದ ಮೊದಲ ಪ್ರಧಾನಿಯಾಗಿರುತ್ತಿದ್ದರೆ, ನಮ್ಮ ದೇಶವು ಅಮೆರಿಕವನ್ನು ಹಿಂದಿಕ್ಕಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ಪಟೇಲರೇ ಪ್ರಧಾನಿ ಆಗಬೇಕು ಎಂದು ಆಗಿ 16 ರಾಜ್ಯಗಳ ಪೈಕಿ 14 ರಾಜ್ಯಗಳು ಒಲವು ವ್ಯಕ್ತಪಡಿಸಿದ್ದವು. ಎರಡು ರಾಜ್ಯಗಳು ಮಾತ್ರವೇ ನೆಹರೂ ಪರವಾಗಿದ್ದವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.