ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ₹ 23 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ

Last Updated 6 ಆಗಸ್ಟ್ 2020, 13:56 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಉತ್ತರ ಮತಕ್ಷೇತ್ರದ 29ನೇ ವಾರ್ಡಿನಲ್ಲಿ ದರ್ಶನಾಪುರ ಜಿಡಿಎ ಬಡಾವಣೆಯಲ್ಲಿ₹ 23 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಖನೀಜ್‌ ಫಾತಿಮಾ ಅವರು ಗುರುವಾರ ಚಾಲನೆ ನೀಡಿದರು.

ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಕಾಮಗಾರಿಗಳು ಮಂಜೂರಾಗಿವೆ. ಬಸವೇಶ್ವರ ಶಾಲೆಯ ಎದುರಿನ ರಸ್ತೆ ದುರಸ್ತಿಗೆ ₹ 10 ಲಕ್ಷ, ಉದ್ಯಾನ ಅಭಿವೃದ್ಧಿಗೆ ₹ 7 ಲಕ್ಷ ಮತ್ತು ಕೊಳವೆಬಾವಿ, ಬಸವೇಶ್ವರ ಕಾಲೊನಿಯಿಂದ ಸಂತ್ರಸವಾಡಿ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನ ನಿಗದಿ ಮಾಡಲಾಗಿದೆ.

‘ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಹಂತ, ಹಂತವಾಗಿ ಈಡೇರಿಸುತ್ತಿದ್ದೇನೆ. ನಗರ ಪ್ರದೇಶಗಳಲ್ಲಿ ಜನರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಗುಣಮಟ್ಟದ ಕಾಮಗಾರಿ ಮಾಡಿ, ಜನರ ವಿಶ್ವಾಸ ಉಳಿಸಿಕೊಳ್ಳಬೇಕು’ ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.

ಕಾಂಗ್ರೆಸ್ ಯುವ ಮುಖಂಡ ಫರಾಜ್ ಉಲ್ ಇಸ್ಲಾಂ, ಪಾಲಿಕೆ ಮಾಜಿ ಸದಸ್ಯ ಮಲಿಕಾರ್ಜುನ ಎಸ್.ಟೆಂಗಳಿ, ಆದಿಲ್ ಸುಲೇಮಾನ ಸೇಠ್, ಮಜರ ಆಲ್‍ಂ ಖಾನ್, ತುಕಾರಾಮ ಕೊಳ್ಳೂರ, ಗುತ್ತೇದಾರರಾದ ದೇವರಾಜ ಪೂಜಾರಿ, ಮುನಾವರ್ ಪಟೇಲ್, ಶೋಯಬ್ ಖಾನ್ ಹಾಗೂ ಬಡಾವಣೆಯ ಹಿರಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT