ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಪ್ರೊಬೇಷನರಿ ಎಎಸ್‌ಐಗಳ ನಿರ್ಗಮನ ಪಥಸಂಚಲನ

Last Updated 29 ನವೆಂಬರ್ 2022, 9:57 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶದ ಯುವ ಜನರನ್ನು ಗಮನದಲ್ಲಿಟ್ಟುಕೊಂಡು ನಡೆಸುತ್ತಿರುವ ಮಾದಕ ದ್ರವ್ಯ ಭಯೋತ್ಪಾದನೆ ಹತ್ತಿಕ್ಕಲು ಎಲ್ಲರೂ ಶ್ರಮಿಸಬೇಕು’ ಎಂದು ಬೆಳಗಾವಿಯ ಹೆಚ್ಚುವರಿ ಅಬಕಾರಿ ಆಯುಕ್ತ ಡಾ.ವೈ.ಮಂಜುನಾಥ (ಜಾರಿ ಮತ್ತು ಅಪರಾಧ) ನಿರ್ಗಮನ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರೊಬೇಷನರಿ ಅಬಕಾರಿ ಎಎಸ್‌ಐಗಳ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದ ಅವರು, ‘ಯುವಕರು ದೇಶದ ಶಕ್ತಿಯಾಗಿದ್ದಾರೆ. ಅವರ ಶಕ್ತಿಯನ್ನು, ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲಸವನ್ನು ದೇಶದ ಏಳಿಗೆ ಸಹಿಸದ ವಿದೇಶಿ ಶಕ್ತಿಗಳು ಮಾಡುತ್ತಿವೆ. ವಿವಿಧ ಭಾಗಗಳಿಂದ ರಾಜ್ಯಕ್ಕೂ ಮಾದಕ ದ್ರವ್ಯ ಪೂರೈಕೆ ಆಗುತ್ತಿದೆ. ಅದನ್ನು ತಡೆಯುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ’ ಎಂದರು.

‘ಅಬಕಾರಿ ಇಲಾಖೆಗೆ ಸರ್ಕಾರ ₹ 29 ಸಾವಿರ ಕೋಟಿ ಆದಾಯವನ್ನು ಗುರಿ ನಿಗದಿ ಮಾಡಲಾಗಿದೆ. ಜೊತೆಗೆ ಅಕ್ರಮ ಮದ್ಯ ಮಾರಾಟ, ಮಾದಕ ವಸ್ತು ಮಾರಾಟವನ್ನು ತಡೆಯಬೇಕಿದೆ. ಇದನ್ನೆಲ್ಲ ಸಾಧ್ಯ ಮಾಡಿ ತೋರಿಸಬೇಕು’ ಎಂದು ಸೂಚನೆ ನೀಡಿದರು.

ಪೊಲೀಸ್ ತರಬೇತಿ ಕಾಲೇಜಿನ ಪ್ರಾಚಾರ್ಯ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, 2003ರಲ್ಲಿ ಆರಂಭವಾದ ನಾಗನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರವು94 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿಯವರೆಗೆ 2796 ಎಎಸ್‌ಐ, ಆರ್‌ಎಸ್‌ಐ, ಡಿವೈಎಸ್‌ಪಿಗಳಿಗೆ ತರಬೇತಿ ನೀಡಲಾಗಿದೆ. 4796 ಕಾನ್‌ಸ್ಟೆಬಲ್‌ಗಳಿಗೆ ಬುನಾದಿ ತರಬೇತಿ ನೀಡಲಾಗಿದೆ. 61 ಅಬಕಾರಿ ಎಎಸ್‌ಐಗಳ ತರಬೇತಿ ಇಂದು ಪೂರ್ಣಗೊಂಡು ಅವರ ನಿರ್ಗಮನ ಪಥಸಂಚಲನ ನಡೆದಿದೆ’ ಎಂದರು.

ಹೆಚ್ಚುವರಿ ಅಬಕಾರಿ ಆಯುಕ್ತ ಡಾ.ವೈ. ಮಂಜುನಾಥ (ಜಾರಿ ಮತ್ತು ಅಪರಾಧ) ಪ್ರಶಿಕ್ಷಣಾರ್ಥಿಗಳು ಗೌರವ ವಂದನೆ ಸಲ್ಲಿಸಿದರು. ಪರೇಡ್‌ ಮುಂದಾಳತ್ವವನ್ನು ಪ್ರಶಿಕ್ಷಣಾರ್ಥಿ ಸಂದೀಪ್ ಎಸ್.ಆರ್. ವಹಿಸಿದ್ದರು.

ಪಿಟಿಸಿ ಉಪ ಪ್ರಾಚಾರ್ಯ ಡಾ.ಕೆ.ಅರುಣ್, ಅಬಕಾರಿ ಇಲಾಖೆ ಜಂಟಿ ನಿರ್ದೇಶಲ ಬಸವರಾಕ ಹಡಪದ ಹಾಗೂ ಅಧಿಕಾರಿಗಳು ಇದ್ದರು.

ಸಂದೀಪ್‌ಗೆ ಸರ್ವೋತ್ತಮ ಪ್ರಶಸ್ತಿ

ಬುನಾದಿ ತರಬೇತಿ ಅವಧಿಯಲ್ಲಿ ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಸೀನಪ್ಪನಹಳ್ಳಿಯ ಸಂದೀಪ್‌ ಎಸ್‌.ಆರ್. ಅವರಿಗೆ ಗೃಹಸಚಿವರ ಖಡ್ಗವನ್ನು ನೀಡಿ ಗೌರವಿಸಲಾಯಿತು.

9 ಎಂ.ಎಂ. ಪಿಸ್ತೂಲ್ ಗುರಿ ಅಭ್ಯಾಸದಲ್ಲಿ ಮುದಸ್ಸರ್ ಬಾಷಾ ಪ್ರಥಮ ಸ್ಥಾನ ಪಡೆದರು. 0.303 ಪಿಸ್ತೂಲ್ ಗುರಿ ಇಡುವಲ್ಲಿ ತೋರಿದ ಕೌಶಲಕ್ಕಾಗಿ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಸಚಿನ್ ಬಿ.ಹೇಮಗಿರಿ ಅವರಿಗೆ ಟ್ರೋಫಿ ನೀಡಲಾಯಿತು. ಒಳಾಂಗಣದಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಗೆ ವೀರೇಶ ಅಶೋಕ ಯರಗುಪ್ಪ ಭಾಜನರಾದರು. ಮಹಿಳಾ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾಗನೂರು ಗ್ರಾಮದ ನೀಲವ್ವ ಗಿರಿಮಲ್ಲಪ್ಪ ಗಲಗಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT