ಶುಕ್ರವಾರ, ಆಗಸ್ಟ್ 19, 2022
27 °C

ಹಳ್ಳದಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದ ಅಫಜಲಪುರ ಜೆಸ್ಕಾಂ ಎಇ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ (ಕಲಬುರ್ಗಿ ಜಿಲ್ಲೆ): ಗುರುವಾರ ರಾತ್ರಿ ಕಲಬುರ್ಗಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಅಫಜಲಪುರ ಜೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಸಿದ್ದರಾಮ ದಾನಪ್ಪ ಅವಟೆ (28) ಅವರ ಶವ ಶುಕ್ರವಾರ ಬೆಳಿಗ್ಗೆ ‌ಪತ್ತೆಯಾಗಿದೆ.

ರಾತ್ರಿ ತಾಲ್ಲೂಕಿನ ವೈಜಾಪುರ-ಬೊಮ್ಮನಹಳ್ಳಿ ಮಧ್ಯದ ಹಳ್ಳದಲ್ಲಿ ಕಾರು ದಾಟಿಸುವ ಯತ್ನದಲ್ಲಿದ್ದಾಗ ಕೊಚ್ಚಿಕೊಂಡು ಹೋಗಿದ್ದರು. 

ಕತ್ತಲು ಹಾಗೂ ಧಾರಾಕಾರ ಮಳೆಯಲ್ಲೇ ಪೊಲೀಸರಿ ಶೋಧ ಕಾರ್ಯ ಆರಂಭಿಸಿದರು. ಆದರೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಹಳ್ಳದಲ್ಲಿ ಶವ ಪತ್ತೆಯಾಯಿತು.

ಯಳಸಂಗಿ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವರೊಂದಿಗೆ ಕಾರಿನಲ್ಲಿದ್ದ ರಾಜಶೇಖರ ಕುಂಬಾರ ಅವರನ್ನು ಗುರುವಾರ ರಾತ್ರಿ ರಕ್ಷಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು