ಅಫಜಲಪುರ (ಕಲಬುರಗಿ ಜಿಲ್ಲೆ): ಘತ್ತರಗಾದ ಭೀಮಾ ನದಿಯಲ್ಲಿ ಶುಕ್ರವಾರ ಶ್ರಾವಣ ಮಾಸದ ನಿಮಿತ್ತ ಸ್ನಾನಕ್ಕೆ ನದಿಗಿಳಿದ ಯುವಕ ಸಚಿನ್ ರಾಜಾರಾಮ ಕಾಂಬಳೆ (23) ನೀರು ಪಾಲಾಗಿದ್ದಾನೆ.
ಯಾದಗಿರಿ ಜಿಲ್ಲೆಯ ಯಂಕಂಚಿ ಗ್ರಾಮದ ಯುವಕ ಭಾಗ್ಯವಂತಿಯ ದರ್ಶನಕ್ಕಾಗಿ ಬಂದಿದ್ದ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಎಎಸ್ಐ ಅಶೋಕ ಜಮಾದಾರ, ಮುಬಾರಕ ಇಂಡಿಕರ್, ರಮೇಶ ಬಿರಾದಾರ, ಮಂಜುನಾಥ ನಿಂಬರಗಿ, ಸಿದ್ದಲಿಂಗ, ಜಗದೇವಪ್ಪ, ಹೊನ್ನಲಿಂಗ ಭಾಗಿಯಾಗಿದ್ದರು