ಚಿಂಚೋಳಿ: ತಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ಶನಿವಾರ ಆಟವಾಡುತ್ತಿದ್ದ 11 ವರ್ಷದ ಬಾಲಕಿ ಹೀನಾ ಕೌಸರ್ ಮನೆಯ ಹಿಂದಿನ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.

ಬಾಲಕಿ ಸಂಜೆಯಾದರೂ ಮನೆಗೆ ಬಾರದಿದ್ದಾಗ ಅವಳನ್ನು ಹುಡುಕಿದ್ದಾರೆ. ಎಲ್ಲಿಯೂ ಕಾಣಿಸದಿದ್ದಾಗ ಅವಳು ಕಾಣೆಯಾಗಿದ್ದಾಳೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅವಳ ಭಾವಚಿತ್ರ ಮತ್ತು ಆಡಿಯೊ ಸಂದೇಶ ಹರಿ ಬಿಡಲಾಗಿತ್ತು.

ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಮಹಾಂತೇಶ, ಸಬ್ ಇನ್ಸ್ಪೆಕ್ಟರ್ ತಿಮ್ಮಯ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮನೆಯ ಹಿಂದಿನ ಬಾವಿಯಲ್ಲಿ ಬಿದ್ದಿರುವ ಶಂಕೆಯಿಂದ ಪೊಲೀಸರು ಅಗ್ನಿಶಾಮಕ ಠಾಣೆಯವರನ್ನು ಕರೆಸಿ ಪರಿಶೀಲಿಸಿದಾಗ ಶವ ದೊರಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

4ನೇ ತರಗತಿ ಉತ್ತೀರ್ಣಳಾಗಿ 5ನೇ ತರಗತಿಯ ಪ್ರವೇಶಕ್ಕೆ ಶಾಲೆ ಆರಂಭವಾಗುವುದನ್ನು ಕಾಯುತ್ತಿದ್ದ ಬಾಲಕಿಯು ಬಾವಿಯಲ್ಲಿರುವ ಮೀನುಗಳನ್ನು ನೋಡಲು ಹೋಗಿ ಜಾರಿ ಬಾವಿಗೆ ಬಿದ್ದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಬಾಲಕಿಯು ಸುಲೇಪೇಟ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.