ಆಳಂದದ ಸಾರ್ವಜನಿಕ ಆಸ್ಪತ್ರೆಗೆ ಕರ್ನಾಟಕ ಆಹಾರ ಆಯೋಗದ ಸದಸ್ಯ ಸುಮಂತ್ ರಾವ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯರಾದ ಪ್ರಮೋಧ ಫರ್ವೀನಾ ಬೇಗಂ ಉಪಸ್ಥಿತರಿದ್ದರು.
ಮಕ್ಕಳಿಗೆ ವಿತರಣೆಯಾಗದ ಮೊಟ್ಟೆ
ಪಟ್ಟಣದ ಸಿಪಿಎಸ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ಮಕ್ಕಳಿಗೆ ಮೊಟ್ಟೆ ವಿತರಣೆ ಕೈಗೊಳ್ಳದ ಕಾರಣ ಮುಖ್ಯಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡರು. ಗ್ಯಾಸ್ ಸಮಸ್ಯೆಯಿಂದ ಎರಡು ದಿನಗಳಿಗೆ ಮೊಟ್ಟೆ ವಿತರಣೆ ಮಾಡಿಲ್ಲ ಎಂದು ಮುಖ್ಯಶಿಕ್ಷಕರು ನೀಡಿದ ಸಮಜಾಯಿಸಿಗೆ 92 ಮಕ್ಕಳಿರುವ ಶಾಲೆಯಲ್ಲಿ ಎರಡು ದಿನ ಮೊಟ್ಟೆ ನೀಡದೆ ಇರುವದು ತಪ್ಪು ತಾವೂ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಿತ್ತು. ಈ ಬೇಜವಾಬ್ದಾರಿತನಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಮಾಹಿತಿ ನೀಡಲಾಗುವುದು ಎಂದು ಸುಮಂತ್ ರಾವ ತಿಳಿಸಿದರು.