ಬುಧವಾರ, ಆಗಸ್ಟ್ 10, 2022
24 °C

ಗೃಹಿಣಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಐನೋಳ್ಳಿಯಲ್ಲಿ ಗೃಹಿಣಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.‌

ಸ್ವಪ್ನಾ ಶಂಕರ ಹುಡಗಿ (28) ಮೃತ ದುರ್ದೈವಿ. ಗಂಡ, ಅತ್ತೆ, ಮಾವ ಮತ್ತು ಮನೆಯವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಮೃತಳ ಪೋಷಕರು ದೂರಿದ್ದಾರೆ.

ತೆಲಂಗಾಣದ ಜಹೀರಾಬಾದನಿಂದ 8 ವರ್ಷಗಳ ಹಿಂದೆ ಐನೋಳ್ಳಿಯ ಶಂಕರ ಹುಡಗಿ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಭಾನುವಾರ ಗಂಡನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ದಂಪತಿಗೆ ಒಂದು ಗಂಡು ಮಗುವಿದೆ. ಸ್ಥಳಕ್ಕೆ ಚಿಂಚೋಳಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜಶೇಖರ ರಾಠೋಡ್ ಭೇಟಿ ನೀಡಿ ಪರಿಶೀಲಿಸಿದರು.

ಪತಿ, ಅತ್ತೆ, ಮಾವ ಹಾಗೂ ಪತಿಯ ಸಹೋದರರು ಹಾಗೂ ಅವರ ಪತ್ನಿಯರು ಸೇರಿ 6 ಮಂದಿ ವಿರುದ್ಧ ಮೃತ ಸ್ವಪ್ನಾ ಪೋಷಕರು ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು