ಕಲಬುರಗಿ: ರಾಜ್ಯದಲ್ಲಿ ಹೃದಯಾಘಾತ, ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿ ರುವವರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೃದಯದ ಆರೋಗ್ಯ ತಪಾಸಣೆಗೆ ಒಳಗಾಗುತ್ತಿರುವರ ಸಂಖ್ಯೆಯಲ್ಲಿಯೂ ಏರಿಕೆ ಆಗುತ್ತಿದೆ. ಇದರಿಂದ ವೈದ್ಯರ ಹಾಗೂ ಶುಶ್ರೂಷಕ ಸಿಬ್ಬಂದಿ ಮೇಲೆ ಕೆಲಸದ ಹೊರೆಯೂ ಬೀಳುತ್ತಿದೆ.

ಕಲಬುರಗಿ ಶಾಖೆಯ ಜಯದೇವ ಆಸ್ಪತ್ರೆಗೆ 371 ಬೆಡ್ಗಳ ಸಾಮರ್ಥ್ಯವಿದೆ. ಪ್ರಸ್ತುತ ಆಸ್ಪತ್ರೆಗೆ ಬರುತ್ತಿರುವ ಒಳ ಹಾಗೂ ಹೊರ ರೋಗಿಗಳ ಸಂಖ್ಯೆಗೆ ಅನುಗುಣವಾಗಿ 160 ಬೆಡ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಎರಡ್ಮೂರು ವಾರಗಳಿಂದ ಹೊಸದಾಗಿ ಚಿಕಿತ್ಸೆಗೆ ಬರುವ ಹೊರರೋಗಿ ವಿಭಾಗದ (ಒಪಿಡಿ) ಸಂಖ್ಯೆಯಲ್ಲಿ ದಿಢೀರನೆ ಏರಿಕೆಯಾಗಿದೆ. ಸಿಬ್ಬಂದಿ ಕೊರತೆಯ ಕಾರಣಕ್ಕೆ ಎಲ್ಲರಿಗೂ ಸಕಾಲಕ್ಕೆ ಆರೋಗ್ಯ ಸೇವೆ ಕೊಡುವಲ್ಲಿ ವ್ಯತ್ಯಯವಾಗುತ್ತಿದೆ.

ಹೊರ ರೋಗಿಗಳ ಸಾಮಾನ್ಯ ನೋಂದಣಿ ವಿಭಾಗದಲ್ಲಿ ತಪಾಸಣೆಗಾಗಿ ಬೆಳಿಗ್ಗೆ 8ರಿಂದಲೇ ಜನರು ಆಸ್ಪತ್ರೆಯ ಮುಂದೆ ಕಾಯತೊಡಗುತ್ತಿದ್ದಾರೆ. 14 ವರ್ಷದ ಮಕ್ಕಳಿಂದ ಹಿಡಿದು 60 ವರ್ಷದ ವೃದ್ಧರವರೆಗೂ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ತಪಾಸಣೆಗೆ ಒಳಗಾಗುತ್ತಿದ್ದಾರೆ.

‘ಹೃದಯಾಘಾತದ ಸರಣಿ ಪ್ರಕರಣಗಳಿಗೂ ಮುನ್ನ ನಿತ್ಯ ಸುಮಾರು 300 ಹೊರ ರೋಗಿಗಳು ಬರುತ್ತಿದ್ದರು. ಈಗ ಅವರ ಸಂಖ್ಯೆ ಸುಮಾರು 650ಕ್ಕೆ ತಲುಪಿದೆ. ಅತಿಯಾದ ರಕ್ತದೊತ್ತಡ, ಆಯಾಸ, ಮಧುಮೇಹ, ಎದೆ ನೋವು, ಪಕ್ಕೆ ನೋವಿಗೂ ಇಸಿಜಿ ಮಾಡುವಂತೆ ಕೋರುತ್ತಿದ್ದಾರೆ. ಶೇ 80ರಷ್ಟು ಮಂದಿಯಲ್ಲಿ ಹೃದಯ ಸಂಬಂಧಿತ ವಲ್ಲದ ನೋವು ಕಾಣಿಸಿಕೊಳ್ಳುತ್ತಿದೆ. ಅವರಿಗೆ ಗ್ಯಾಸ್ಟ್ರಿಕ್, ನೋವು ನಿವಾರಕ ಮಾತ್ರೆ ಕೊಟ್ಟು, ಧೈರ್ಯ ತುಂಬಿ ಕಳುಹಿಸುತ್ತಿದ್ದೇವೆ’ ಎನ್ನುತ್ತಾರೆ ಜಯದೇವ ಆಸ್ಪತ್ರೆ ವೈದ್ಯರು.

‘ಎದೆಯ ಭಾಗದಲ್ಲಿ ಸಣ್ಣ–ಪುಟ್ಟ ನೋವಿದ್ದವರೂ ಚಿಕಿತ್ಸೆಗೆ ಬರುತ್ತಿರುವುದರಿಂದ ನಿಜವಾಗಿಯೂ ಹೃದಯ ಕಾಯಿಲೆಯಿಂದ ಬಳಲುತ್ತಿವವರ ಆರೈಕೆ ಮಾಡುವಲ್ಲಿ ಹಿನ್ನಡೆಯಾಗುತ್ತಿದೆ. ಪ್ರತಿಯೊಬ್ಬರ ವರದಿ ನೋಡಿ ಸಲಹೆ ನೀಡುವ, ಚಿಕಿತ್ಸೆ ಕೊಡುವ ಕಾರ್ಡಿಯಾಲಜಿಸ್ಟ್, ಡ್ಯುಟಿ ಡಾಕ್ಟರ್, ಆರೈಕೆಯ ಸ್ಟಾಫ್ ನರ್ಸ್ಗಳ ಮೇಲೆ ಕೆಲಸದ ಹೊರೆಯಾಗುತ್ತಿದೆ. ಆಸ್ಪತ್ರೆಗೆ ಬರುತ್ತಿರುವ ಜನರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಕಾರಣ ಈಗಿರುವ ಸಿಬ್ಬಂದಿಯಿಂದ ನಿರ್ವಹಣೆಯೂ ಕಷ್ಟವಾಗುತ್ತಿದೆ’ ಎಂನ್ನುತ್ತಾರೆ ವೈದ್ಯರು.

‘65 ಸ್ಟಾಫ್ ನರ್ಸ್ ನೇಮಕ’

‘ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಈಗಿರುವ ಬೆಡ್ಗಳಿಗೆ ತಕ್ಕಷ್ಟು ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳ ಸಂಖ್ಯೆ ನೋಡಿಕೊಂಡು ಬೆಡ್ಗಳನ್ನು ಹಂತ–ಹಂತವಾಗಿ ಹೆಚ್ಚಿಸಲಾಗುತ್ತಿದೆ. 65 ಮಂದಿ ಸ್ಪಾಫ್ ನರ್ಸ್ಗಳ ನೇಮಕಾತಿ ಪಟ್ಟಿ ಬಿಡುಗಡೆಯಾಗಿದ್ದು, ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ’ ಎಂದು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಪ್ರಭಾರ) ಡಾ.ವೀರೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯಲ್ಲಿ ಪ್ರಸ್ತುತ ಐವರು ತಜ್ಞ ಸರ್ಜನ್ಗಳು, ತಲಾ ಇಬ್ಬರು ವ್ಯಾಸ್ಕಲುರ್ (ರಕ್ತ ನಾಳೀಯ) ಸರ್ಜನ್ ಮತ್ತು ಅನಸ್ತೇಶಿಯಾ (ಅರಿವಳಿಕೆ) ತಜ್ಞರು, 10 ಮಂದಿ ಕಾರ್ಡಿಯಾಲಾಜಿಸ್ಟ್ಗಳಿದ್ದಾರೆ. ಯಾವುದೇ ಅಡ್ಡಿಗಳು ಇಲ್ಲದೆ ಚಿಕಿತ್ಸೆಗಳು ನಡೆಯುತ್ತಿವೆ. ಮುಂದಿನ ಕೆಲವು ದಿನಗಳಲ್ಲಿ 20 ಬೆಡ್ಗಳು ಹೆಚ್ಚಳವಾಗಲಿವೆ’ ಎಂದರು.

‘15 ಕಾರ್ಡಿಯಾಲಾಜಿಸ್ಟ್, 10 ಸರ್ಜನ್ ಅವಶ್ಯ’

‘ರೋಗಿಗಳ ಸಂಖ್ಯೆ ಏರಿಕೆಯಾದಂತೆ ಇಡೀ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಆಸ್ಪತ್ರೆಗೆ ಕನಿಷ್ಠ 25 ಕನ್ಸಲ್ಟೆಂಟ್ ಡಾಕ್ಟರ್, 15 ಕಾರ್ಡಿಯಾಲಜಿಸ್ಟ್, 10 ಮಂದಿ ಸರ್ಜನ್ಗಳು ಹಾಗೂ 200 ಮಂದಿ ಸ್ಟಾಫ್ ನರ್ಸ್ಗಳ ಅವಶ್ಯವಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ವೈದ್ಯರು.

‘ಹೃದಯ ಸಂಬಂಧಿತ ರೋಗದ ಚಿಕಿತ್ಸೆಯಲ್ಲಿ ವೈದ್ಯರ ವಿಶ್ರಾಂತಿ ಬಹುಮುಖ್ಯವಾಗುತ್ತದೆ. ಆದರೆ, ಕೆಲವು ದಿನಗಳಿಂದ ಅವಿರತವಾಗಿ ಚಿಕಿತ್ಸೆಯಲ್ಲಿ ತೊಡಗಿದ್ದು, ನಮ್ಮ ಮೇಲೂ ಒತ್ತಡ ಆಗುತ್ತಿದೆ. ಮಾನವ ಸಂಪನ್ಮೂಲ ಬಹಳ ಕಡಿಮೆ ಇದ್ದು, ರೋಗಿಗಳ ಆರೈಕೆಯು ಸರಿಯಾಗಿ ಆಗುತ್ತಿಲ್ಲ’ ಎಂದರು.

‘ಸಾಮಾನ್ಯ ವಾರ್ಡ್ಗಳಲ್ಲಿನ 10 ಬೆಡ್ಗಳಿಗೆ ನಾಲ್ವರು ಹಾಗೂ ಐಸಿಯುನಲ್ಲಿನ ಪ್ರತಿ ಬೆಡ್ಗೆ ಒಬ್ಬೊಬ್ಬರು ಸ್ಟಾಫ್ ನರ್ಸ್ಗಳು ಇರಬೇಕು. ಪ್ರಸ್ತುತ, ಸಾಮಾನ್ಯ ವಾರ್ಡ್ಗಳ 10 ಬೆಡ್ಗಳಿಗೆ ಒಬ್ಬ ನರ್ಸ್ ಹಾಗೂ ಐಸಿಯುನಲ್ಲಿನ 4 ಬೆಡ್ಗಳಿಗೆ ಒಬ್ಬರು ನರ್ಸ್ ಇದ್ದಾರೆ. ರೋಗಿಯ ಆರೈಕೆಯಲ್ಲಿ ಒಂದು ನಿಮಿಷ ವ್ಯತ್ಯಾಸವಾದರೂ ಕಷ್ಟವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.