ಜೇವರ್ಗಿ: ‘ಪಟ್ಟಣದಲ್ಲಿ ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡುವುದರ ಜೊತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಪುರಸಭೆ ನೂತನ ಅಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ಅವರು, ‘ಪುರಸಭೆ ವ್ಯಾಪ್ತಿಯ ಎಲ್ಲ 23ವಾರ್ಡ್ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮಹಿಳೆಯರಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಶೀಘ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪಟ್ಟಣದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗುವುದು. ಪಟ್ಟಣದ 23ವಾರ್ಡ್ಗಳಿಗೂ ತಾರತಮ್ಯವಿಲ್ಲದೇ ಸಮಾನವಾಗಿ ಅನುದಾನ ಹಂಚಲಾಗುತ್ತದೆ. ಇದಕ್ಕೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ಸಹಕಾರ ನೀಡಬೇಕು’ ಎಂದರು.

ಪಟ್ಟಣದ ವಿಜಯಪುರ, ಶಹಾಪೂರ ಹಾಗೂ ಕಲಬುರಗಿ ರಸ್ತೆಗಳಲ್ಲಿ ಮೂರು ಸ್ವಾಗತ ಕಮಾನುಗಳ ನಿರ್ಮಾಣಕ್ಕೆ ₹30 ಲಕ್ಷ, ಅಗ್ನಿಶಾಮಕ ಠಾಣೆಯಿಂದ ಕ್ರೀಡಾಂಗಣವರೆಗೆ ರಸ್ತೆ ಅಗಲೀಕರಣ ಹಾಗೂ ಸೌಂದರ್ಯಿಕರಣಕ್ಕೆ ₹1 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು. ಪಟ್ಟಣದ ಜನತೆ ಹಾಗೂ ಪುರಸಭೆ ಸದಸ್ಯರು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನೂತನ ಉಪಾದ್ಯಕ್ಷೆ ಗಂಗುಬಾಯಿ ಜೆಟ್ಟೆಪ್ಪ ಅಧಿಕಾರ ಸ್ವೀಕಾರ ಮಾಡಿದರು. ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಇದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೆಡಿಎಸ್ ಮುಖಂಡರಾದ ರಮೇಶ್ ಬಾಬು ವಕೀಲ, ತಾಲ್ಲೂಕು ಅದ್ಯಕ್ಷ ಎಂ.ಡಿ.ರೌಫ್ ಹವಾಲ್ದಾರ್, ಶರಣಗೌಡ ಪಾಟೀಲ ಯಲಗೋಡ, ರುಕುಂ ಪಟೇಲ ರಂಜಣಗಿ, ಬಸವರಾಜ ಪಾಟೀಲ ನರಿಬೋಳ, ಗುರುಶಾಂತಯ್ಯ ಹಿರೇಮಠ, ಸಾಹೇಬಗೌಡ ಕಲ್ಲಾ, ಸಂಗಣಗೌಡ ರದ್ದೇವಾಡಗಿ, ಸಿದ್ಧರಾಮ ಯಳಸಂಗಿ, ಚಂದನ ಮಹೇಂದ್ರಕರ್, ಸಲೀಂ ಅಡತ್, ಮಲ್ಲಿಕಾರ್ಜುನ ಭಜಂತ್ರಿ, ರಾಜು ತಳವಾರ, ವಿಜಯಕುಮಾರ ನರಿಬೋಳ, ಜೆಟ್ಟೆಪ್ಪ ಮಂದರವಾಡ, ಚಂದ್ರಕಾಂತ ಸಾಹು ಬೆಲ್ಲದ್, ರೇವಣಸಿದ್ದಪ್ಪ ಅಕ್ಕಿ, ರವಿ ಪಡಶೆಟ್ಟಿ ಸೇರಿದಂತೆ ಹಲವಾರು ಜನ ಜೆಡಿಎಸ್ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.