‘ವಿರೋಧ ಪಕ್ಷದವರು ಈಗ ಎದ್ದಿದ್ದಾರೆ’
‘ವಿರೋಧ ಪಕ್ಷದವರು ಈತನಕ ಮಲಗಿದ್ದರು. ಈಗ ಎದ್ದಿದ್ದಾರೆ. ನಾವು ತಿಂಗಳಿಂದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ. ಶಾಸಕರು ಸಚಿವರು ಹಾನಿಯಾದಲ್ಲೆ ಭೇಟಿ ಕೊಟ್ಟು ರೈತರಿಗೆ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಸರಣಿ ಸಭೆ ವಿಡಿಯೊ ಸಂವಾದ ಮಾಡುತ್ತಿದ್ದೇವೆ. ಬಿಜೆಪಿಯ ಆರ್.ಅಶೋಕ ವಿಜಯೇಂದ್ರ ಹತ್ತಿರ ಪಾಠ ಕಲಿತು ರೈತರ ಬಗೆಗೆ ನಾವು ಕಾಳಜಿ ವಹಿಸುವ ಅಗತ್ಯವಿಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ‘ಬೆಳೆ ಹಾನಿ ಪ್ರಮಾಣ ನಿತ್ಯ ಹೆಚ್ಚುತ್ತಿದ್ದು ಪ್ರಾಥಮಿಕ ವರದಿ ಪ್ರಕಾರ ಈತನಕ ರಾಜ್ಯದಲ್ಲಿ ಅಂದಾಜು 9 ಲಕ್ಷ ಹೆಕ್ಟೇರ್‌ಗಳಷ್ಟು ಹಾನಿಯಾಗಿದೆ. ಈ ಪೈಕಿ ಬೀದರ್ ಕಲಬುರಗಿ ಯಾದಗಿರಿ ರಾಯಚೂರು ಜಿಲ್ಲೆಗಳಲ್ಲೇ ಬಹುತೇಕ 6–7 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಹಾನಿ ಅಂದಾಜಿಸಲಾಗಿದೆ’ ಎಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.