ಬೆಣ್ಣತೊರಾ ನದಿಯ ನೀರಿನಿಂದ ಪ್ರವಾವಕ್ಕೀಡಾಗಿರುವ ಕಾಳಗಿ ತಾಲ್ಲೂಕಿನ ಕಣಸೂರು ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಗ್ರಾಮ ಸ್ಥಳಾಂತರದ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ನಂತರ ಸಚಿವರು ಚಿತ್ತಾಪುರ ಮತಕ್ಷೇತ್ರದ ಗುಂಡಗುರ್ತಿ (ತಾಯಿ ರಾಧಾಬಾಯಿ ಖರ್ಗೆ ಅವರ ತವರುಮನೆ) ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರು.