ರಂಜಿಸಿದ ಹಾಸ್ಯ ಮಿಮಿಕ್ರಿ...
ಕಲಾವಿದ ದಯಾನಂದ ಬೀಳಗಿ ಅವರು ‘ಕುಂಟ ಕೋಣ ಮೂಕ ಜಾಣ’ ನಾಟಕದ ಸನ್ನಿವೇಶವೊಂದನ್ನು ಪ್ರಸ್ತುತಪಡಿಸಿದರು. ಅವರ ಹಾಸ್ಯ ಸಂಭಾಷಣೆಗೆ ನೆರೆದಿದ್ದವರು ನಕ್ಕು ನಲಿದರು. ಕಲಾವಿದೆ ಗೀತಾ ಮೋಂಟಡ್ಕ ಪ್ರಕೃತಿಯಲ್ಲಿನ ಪ್ರಾಣಿ–ಪಕ್ಷಿಗಳ ಕಲರವ ಯಾವುದೇ ಸಾಧನವಿಲ್ಲದೇ ನಾದವಾಗಿ ಹೊಮ್ಮಿಸಿ ಚಪ್ಪಾಳೆ ಗಿಟ್ಟಿಸಿದರು. ಗುಬ್ಬಚ್ಚಿ ಚಿಲಿಪಿಲಿ ಕಾಗೆ– ಹುಂಚದ ಕೂಗಾಟ ಕಂತ್ರಿನಾಯಿ ಬೊಗಳುವಿಕೆ ಸಾಕಿದ ನಾಯಿಯ ಕುಂಯಿಗುಟ್ಟುವಿಕೆ ಬೆಕ್ಕು–ಮರಿ ಬೆಕ್ಕಿನ ‘ಮೀಯಾಂ’ ಸಂಭಾಷಣೆ ಮೇಕೆಯ ಕೂಗುವಿಕೆ ಪುಟಾಣಿ ಮಗುವಿನ ಅಳು ಪ್ರಯಾಣ ಆರಂಭಿಸಿದ ರೈಲಿನ ಸದ್ದು... ನೆರೆದಿದ್ದವರ ಮನಸೂರೆಗೊಂಡವು.