ಶನಿವಾರ, 13 ಡಿಸೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ತಗ್ಗುದಿನ್ನೆ ರಸ್ತೆ: ಹೈರಾಣಾದ ‘ಜಮಶೆಟ್ಟಿ’ ಜನ

ಪಾಲಿಕೆಯಿಂದ 4–5 ದಿನಕ್ಕೊಮ್ಮೆ ನೀರು; ಸಮರ್ಪಕ ಮೂಲಸೌಕರ್ಯಕ್ಕೆ ಕಾಲೊನಿ ನಿವಾಸಿಗಳ ಒತ್ತಾಯ
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published : 13 ಡಿಸೆಂಬರ್ 2025, 6:50 IST
Last Updated : 13 ಡಿಸೆಂಬರ್ 2025, 6:50 IST
ಫಾಲೋ ಮಾಡಿ
Comments
ಕಲಬುರಗಿಯ ಜಮಶೆಟ್ಟಿ ನಗರದ ರಸ್ತೆಯ ದುಸ್ಥಿತಿ
ಕಲಬುರಗಿಯ ಜಮಶೆಟ್ಟಿ ನಗರದ ರಸ್ತೆಯ ದುಸ್ಥಿತಿ
ರಸ್ತೆ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಅರ್ಧಕ್ಕೆ ಮಾಡಿ ಬಿಡಲಾಗಿದೆ. ಮುಖ್ಯವಾಗಿ ನಮಗೆ ಬಡಾವಣೆಯಲ್ಲಿ ಸಿಸಿ ರಸ್ತೆ ಮಾಡಿಕೊಡಬೇಕು. ಜೆಜೆಎಂ ನಲ್ಲಿಗಳಲ್ಲಿ ನಿರಂತರವಾಗಿ ನೀರು ಬರುವಂತಾಗಬೇಕು
ಜಗದೇವಿ ತಿಪ್ಪಣ್ಣ ಕೆಲ್ಲೂರ ನಿವಾಸಿ
ಪಾಲಿಕೆಯಿಂದ ನಿಯಮಿತವಾಗಿ ನೀರು ಬಿಡಲಾಗುತ್ತಿದ್ದು ವ್ಯತ್ಯಯವಾಗಿದ್ದಲ್ಲಿ ಮೇಲ್ವಿಚಾರಣೆ ಮಾಡಲಾಗುವುದು. ಜೆಜೆಎಂ ಕಾಮಗಾರಿ ಇಡೀ ಕಲಬುರಗಿ ಸಮಸ್ಯೆಯಾಗಿದ್ದು ಇನ್ನೂ 4 ತಿಂಗಳಲ್ಲಿ ಪೂರ್ಣವಾಗಬಹುದು
ಲಿಂಗರಾಜ ತಾರ್‌ಫೈಲ್‌ 54ನೇ ವಾರ್ಡ್‌ ಸದಸ್ಯ
‘ಜಮಶೆಟ್ಟಿ ನಗರಕ್ಕೇ ಹೆಚ್ಚಿನ ಅನುದಾನ’
‘ಜಮಶೆಟ್ಟಿ ನಗರದಲ್ಲಿ ಶಿವಲಿಂಗೇಶ್ವರ ಗುಡಿಯಿಂದ ₹15 ಲಕ್ಷ ಮೊತ್ತದ ಸಿಸಿ ರಸ್ತೆ ಕಾಮಗಾರಿ ಮಾಡಲಾಗಿದೆ. ಇದೇ ರಸ್ತೆಯ ಮುಂದಿನ ಕಾಮಗಾರಿಗಾಗಿ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಮಹಾನಗರ ಪಾಲಿಕೆಯ 54ನೇ ವಾರ್ಡ್‌ ಸದಸ್ಯ ಲಿಂಗರಾಜ ತಾರ್‌ಫೈಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಡಿ.13ರಂದು ಇದೇ ನಗರದ ಹನುಮಾನ ಮಂದಿರದಿಂದ ಮಾಣಿಕಪ್ಪ ಬಿರಾದಾರ ಮನೆಯವರೆಗೆ ₹10 ಲಕ್ಷ ಮೊತ್ತದಲ್ಲಿ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಒಳಚರಂಡಿ ಕಾಮಗಾರಿ ಕೂಡ ನಡೆಯುತ್ತಿದೆ. ತಾರ್‌ಫೈಲ್‌ ಬಡಾವಣೆಗಿಂತ ಜಮಶೆಟ್ಟಿ ನಗರಕ್ಕೇ ಹೆಚ್ಚಿನ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು. ‘54ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ 19 ಸಾವಿರ ಮತದಾರರಿದ್ದಾರೆ. 16 ಬಡಾವಣೆಗಳು ಬರುತ್ತವೆ. ಇದುವರೆಗೆ ಈ ಬಡಾವಣೆಗಳಲ್ಲಿ ₹6 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ₹5 ಕೋಟಿ ಅನುದಾನ ಬರಲಿದ್ದು ಅವಶ್ಯಕ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT