ಕಲಬುರಗಿ: ಒಂಬತ್ತು ಹಾಗೂ 11 ದಿನಗಳ ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಬುಧವಾರ ಸಂಜೆ ಪಥಸಂಚಲನ ನಡೆಸಿದರು.

ನಗರದ ಕೋಟೆ ಬಳಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಸ್ಥಳದಿಂದ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ನೇತೃತ್ವದಲ್ಲಿ ಪಥ ಸಂಚಲನ ಆರಂಭವಾಯಿತು. ಅಲ್ಲಿಂದ ಹುಮನಾಬಾದ್ ಬೇಸ್, ಎಂಎಟಿ ಕ್ರಾಸ್, ಮುಸ್ಲಿಂ ಚೌಕ್, ನ್ಯಾಷನಲ್ ಚೌಕ್, ಸಂತ್ರಾಸವಾಡಿ, ಅಲ್ಲಿಂದ ಸರಾಫ್ ಬಜಾರ್ದ ಗಣೇಶ ಮಂದಿರ, ಜನತಾ ಬಜಾರ್ ಸರ್ಕಲ್, ಮಾರ್ಕೆಟ್ ಮಸ್ಜಿದ್, ಚಪ್ಪಲ್ ಬಜಾರ್, ಜೆಬಿ ಸರ್ಕಲ್, ಬ್ರಹ್ಮಪುರ ಪೊಲೀಸ್ ಠಾಣೆ ಎದುರಿನಿಂದ ಜಗತ್ ವೃತ್ತದ ತನಕ ಪಥ ಸಂಚಲನ ನಡೆಯಿತು.

‘ಕಲಬುರಗಿ ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣಪತಿಗಳಲ್ಲಿ 9ನೇ ದಿನವಾದ ಗುರುವಾರ 90ಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಶುಕ್ರವಾರ ಈದ್ ಮಿಲಾದ್ ಆಚರಣೆ ಜರುಗಲಿದೆ. ಶನಿವಾರ ಮತ್ತೆ 11ನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ಜರುಗಲಿದೆ. ಈ ಅಂಗವಾಗಿ ಪಥಸಂಚಲನ ನಡೆಸಲಾಯಿತು’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಪಥ ಸಂಚಲನದಲ್ಲಿ ಪೊಲೀಸ್ ವಸತಿ ಶಾಲೆಯ ಪ್ರಾಚಾರ್ಯ ಡಿ.ಕಿಶೋರ ಬಾಬು, ಡಿಸಿಪಿ ಕನಿಕಾ ಸಿಕ್ರಿವಾಲ್, ವಿವಿಧ ಠಾಣೆಗಳ ಇನ್ಸ್ಪೆಕ್ಟರ್ಗಳು, ಸಿವಿಲ್, ಕೆಎಸ್ಆರ್ಪಿ, ಸಿಎಆರ್, ಗೃಹರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.