ಸೇಡಂ (ಕಲಬುರಗಿ ಜಿಲ್ಲೆ): ಎರಡು ಬೈಕ್ಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟ ಘಟನೆ ತಾಲ್ಲೂಕಿನ ತೆಲ್ಕೂರ–ಹಾಬಾಳ ರಸ್ತೆ ಮಾರ್ಗ ಮಧ್ಯದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಹಾಬಾಳ (ಟಿ) ಗ್ರಾಮದ ಮಲ್ಲಿಕಾರ್ಜುನ ರೇವಣಸಿದ್ದಪ್ಪ (20), ಸಿದ್ದು ಕಿಶನ್ ಗುಡಿಸಿ (25) ಸ್ಥಳದಲ್ಲಿಯೇ ಮೃತಪಟ್ಟರೆ ಪ್ರಕಾಶ ತಿಪ್ಪಣ್ಣ (19), ಸುರೇಶ ಪುಂಡರೆಡ್ಡಿ (20) ಕಲಬುರಗಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ಚಿಕಿತ್ಸೆಗಾಗಿ ಸೇಡಂ ಸರ್ಕಾರಿ ಆಸ್ಪತ್ತೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೈಕ್ಳ ಭಾರಿ ವೇಗಕ್ಕೆ ಎರಡು ಬೈಕುಗಳು ನುಜ್ಜುಗುಜ್ಜಾಗಿದ್ದು ರಸ್ತೆಯಿಂದ ದೂರದಲ್ಲಿ ಬಿದ್ದಿವೆ. ಟೈರ್ಗಳು ಬಿಚ್ಚಿ ಬೇರೆಡೆ ಬಿದ್ದಿವೆ.

ಸ್ಥಳಕ್ಕೆ ಪಿಎಸ್ಐ ಮಂಜುನಾಥರೆಡ್ಡಿ, ಪೊಲೀಸ್ ಕಾನ್ಸ್ಟೆಬಲ್ಗಳಾದ ಹೊನ್ನಪ್ಪ, ನಾಗರಾಜ ಭೇಟಿ ನೀಡಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.