ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಕೋವಿಡ್ 19 ಶಂಕಿತ ಸಾವು: ಸಂಪರ್ಕದಲ್ಲಿದ್ದವರ ಮೇಲೆ ನಿಗಾ

Last Updated 11 ಮಾರ್ಚ್ 2020, 11:22 IST
ಅಕ್ಷರ ಗಾತ್ರ

ಕಲಬುರ್ಗಿ: ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಕೋವಿಡ್ 19 ಶಂಕಿತ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿರಿಸಿ, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೌದಿ ಅರೇಬಿಯಾದಿಂದ ಈಚೆಗಷ್ಟೇ ನಗರಕ್ಕೆ ಹಿಂದಿರುಗಿದ್ದಮೊಹಮದ್ ಹುಸೇನ್ ಸಾದಿಕ್ (76) ಅವರಿಗೆ ಜ್ವರ, ಕೆಮ್ಮು,ನೆಗಡಿ, ಅತೀವ ಶ್ವಾಸಕೋಸ ಸಮಸ್ಯೆಗಳಿದ್ದವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ವಿಷಯ ತಿಳಿದ ತಕ್ಷಣ ಪ್ರತ್ಯೇಕ ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರಿಸಿದೆವು ಜಿಲ್ಲಾಧಿಕಾರಿ ಹೇಳಿದರು.

ಕೊರೊನಾವೈರಸ್‌ ಕುರಿತು ಪರೀಕ್ಷೆ ನಡೆಸಿ ವರದಿ ನೀಡುವಂತೆಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಗೆ ಕಳಿಸಿದ್ದೆವು.ಅವರ ಕುಟುಂಬದವರು ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಹೈದರಾಬಾದ್‌ಗೆ ಕರೆದೊಯ್ದರು. ಅಲ್ಲಿಯೂ ಚಿಕಿತ್ಸೆ ಯಶಸ್ವಿಯಾಗಲಿಲ್ಲ.ವಾಪಸ್ ಕಲಬುರ್ಗಿಗೆ ಕರೆತರುವಾಗ ಮೃತಪಟ್ಟರು ಎಂದು ಹೇಳಿದರು.

ಅವರ ಜೊತೆಗೆ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹೆಚ್ಚಿ, ಪ್ರತ್ಯೇಕವಾಗಿರಿಸಿ ಆರೋಗ್ಯ ಸ್ಥಿತಿಗತಿ ಗಮನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿಎಂ.ಎ.ಜಬ್ಬಾರ್, ‘ಮೃತರಕುಟುಂಬದಲ್ಲಿ ಏಳೆಂಟು ಜನರಿದ್ದಾರೆ. ಒಟ್ಟು 30 ಜನರನ್ನು ಗುರುತಿಸಿನಿಗಾ ಇಡಲಾಗಿದೆ. ಮೃತರಿಗೆ ಮಾರ್ಚ್ 6ರಿಂದ ಜ್ವರ ಮತ್ತು ಕೆಮ್ಮು ಇತ್ತು. ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು. 9ರಂದು ಒಳರೋಗಿಯಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರ ಕಫದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ನಾಳೆ ಮಧ್ಯಾಹ್ನ ವರದಿ ಬರುವ ನಿರೀಕ್ಷೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT