ಶನಿವಾರ, ಸೆಪ್ಟೆಂಬರ್ 26, 2020
23 °C

ಕಲಬುರ್ಗಿ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಕುಲಾಲಿ ರೈಲ್ವೆ ನಿಲ್ದಾಣದ ಕೆಳ ಸೇತುವೆ ನಿರ್ಮಾಣಕ್ಕಾಗಿ ರೈಲ್ವೆ ₹ 7.84 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಅದಕ್ಕೆ ಶೇ 2 ಮೊತ್ತವನ್ನು ಭರಿಸದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಸದ ಡಾ.ಉಮೇಶ ಜಾಧವ ತರಾಟೆಗೆ ತೆಗೆದುಕೊಂಡರು.

ಇಲಾಖೆ ಅಧಿಕಾರಿಗಳು ತಮ್ಮ ಪಾಲಿನ ₹ 15.67 ಲಕ್ಷದ ಪಾಲನ್ನು ಸಲ್ಲಿಸದ ಕಾರಣ ಹಣ ಬಿಡುಗಡೆ ಮಾಡಲು ಆಗಿಲ್ಲ ಎಂದು ರೈಲ್ವೆ ಇಲಾಖೆ ಎಂಜಿನಿಯರ್ ತಿಳಿಸಿದರು. ₹ 15 ಲಕ್ಷಕ್ಕಾಗಿ ಇಷ್ಟು ದಿನ ಕಾಮಗಾರಿ ಸ್ಥಗಿತಗೊಳಿಸಿದ್ದೀರಾ ಎಂದು ಲೋಕೋಪಯೋಗಿ ಇಲಾಖೆ ಅಫಜಲಪುರ ವಿಭಾಗದ ಸಹಾಯಕ ಎಂಜಿನಿಯರ್ ಗೆ ಪ್ರಶ್ನಿಸಿದರು. 

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಶರತ್ ಬಿ. ಹಣ ಇಲ್ಲದಿದ್ದರೆ ಹೇಳಿ ಇಂದೇ ಬಿಡುಗಡೆ ‌ಮಾಡುತ್ತೇವೆ. ತಕ್ಷಣ ಹಣ ಬಿಡುಗಡೆ ಮಾಡಿದ ಪತ್ರವನ್ನು ತಮಗೆ ಕಳಿಸಿಕೊಡಬೇಕು ಎಂದು ತಾಕೀತು ‌ಮಾಡಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು