ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಇನ್ನೂ ಪತ್ತೆಯಾಗದ 35 ನಾರಿಯರು

276 ಮಹಿಳೆಯರ ಪೈಕಿ 241 ಮಹಿಳೆಯರು ಪತ್ತೆ: ಹೆಚ್ಚುತ್ತಿರುವ ಪತ್ತೆಯಾಗದವರ ಅಂತರ
Published 2 ಆಗಸ್ಟ್ 2023, 6:37 IST
Last Updated 2 ಆಗಸ್ಟ್ 2023, 6:37 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆ ಮತ್ತು ಪುರುಷರ ನಾಪತ್ತೆ ಪ್ರಕರಣಗಳ ಪತ್ತೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ತಗ್ಗುತ್ತಿದ್ದರೂ ಪತ್ತೆಯಾಗದವರ ಅಂತರ ಹೆಚ್ಚುತ್ತಲಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ನಾಪತ್ತೆಯಾದವರ ಪೈಕಿ 35 ನಾರಿಯರು ಇನ್ನೂ ಸಿಕ್ಕಿಲ್ಲ.

ಯುವಕ–ಯುವತಿಯರಲ್ಲಿನ ಪ್ರೇಮ ಪ್ರಕರಣಗಳು, ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾದವರ ಹುಡುಕಿ ಹೋಗುವುದು, ವಿವಾಹಿತರಲ್ಲಿ ಹೆಚ್ಚಾಗುತ್ತಿರುವ ಕೌಟುಂಬಿಕ ಕಲಹ, ಮನಸ್ತಾಪ, ಆರ್ಥಿಕ ಸ್ಥಿತಿ, ಸಾಮಾಜಿಕ ಪಿಡುಗಗಳು ಸೇರಿ ನಾನಾ ಕಾರಣಗಳಿಗೆ ಮನೆ ಬಿಟ್ಟು ಹೋಗುತ್ತಿದ್ದಾರೆ. ಅವರ ಪೈಕಿ ಕೆಲವರನ್ನಷ್ಟೇ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ.

ಜಿಲ್ಲಾ ಅಪರಾಧ ದಾಖಲೆ ಬ್ಯೂರೊ(ಡಿಸಿಆರ್‌ಬಿ) ಪ್ರಕಾರ, 2021ರ 170 ಪ್ರಕರಣಗಳಲ್ಲಿ 154 ಮಂದಿಯನ್ನು ಪತ್ತೆಹಚ್ಚಲಾಗಿತ್ತು. ಇದರಲ್ಲಿ 16 ಜನ ಮಾತ್ರ ಪತ್ತೆಯಾಗಿರಲಿಲ್ಲ. 2022ರಲ್ಲಿ ಅದು 23ಕ್ಕೆ ಏರಿಕೆಯಾಗಿದೆ. 2023ರ ಜೂನ್‌ 30ರ ವರೆಗಿನ 6 ತಿಂಗಳಲ್ಲಿ ದಾಖಲಾದ 69 ಪ್ರಕರಣಗಳಲ್ಲಿ 35 ಮಂದಿಯ ಸುಳಿವು ಇನ್ನು ಸಿಕ್ಕಿಲ್ಲ. 

2021 ಮತ್ತು 2023ರ ಜೂನ್ 30ರ ಅವಧಿಯ ನಡುವೆ 18 ವರ್ಷ ಮೇಲ್ಪಟ್ಟ 118 ಪುರುಷರು ಕಾಣೆಯಾಗಿದ್ದಾರೆ. ಅವರ ಪೈಕಿ 80 ಪುರುಷರು ಪತ್ತೆಯಾಗಿದ್ದು, 38 ಪುರಷರು ಇನ್ನು ನಿಗೂಢವಾಗಿ ಉಳಿದಿದ್ದಾರೆ. ಅವರ ಇರುವಿಕೆ ಇದುವರೆಗೂ ತಿಳಿದುಬಂದಿಲ್ಲ ಎಂಬುದು ಡಿಸಿಆರ್‌ಬಿ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಪುರುಷ ಮತ್ತು ಮಹಿಳೆಯರು ಸೇರಿ 394 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, 321 ಪತ್ತೆಯಾಗಿವೆ. ಈ ಪೈಕಿ 73 ಪ್ರಕರಣಗಳು ಪತ್ತೆಯಾಗಿಲ್ಲ. ಕಲಬುರಗಿ ನಗರದ ವ್ಯಾಪ್ತಿಯಲ್ಲಿ ಇದೇ ಅವಧಿಯಲ್ಲಿ ನಾಪತ್ತೆಯಾದ 366 ಪ್ರಕರಣಗಳ ಪೈಕಿ 281 ಪ್ರಕರಣಗಳು ಪತ್ತೆಯಾಗಿದ್ದು, 85 ಪ್ರಕರಣಗಳು ಬಾಕಿ ಉಳಿದಿವೆ.

2021ರಲ್ಲಿ ಒಟ್ಟು 170 ಮಂದಿ ಕಾಣೆಯಾಗಿದ್ದು, ಅದರಲ್ಲಿ 154 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 16 ಪ್ರಕರಣಗಳು ಬಾಕಿ ಉಳಿದಿವೆ. ಈ 170 ಪ್ರಕರಣಗಳ ಪೈಕಿ 51 ಮಂದಿ ಪುರುಷರು ನಾಪತ್ತೆಯಾಗಿದ್ದು, 40 ಮಂದಿ ಪತ್ತೆಹಚ್ಚಲಾಗಿದೆ. ಉಳಿದ 11 ಮಂದಿಯ ಸುಳಿವಿಲ್ಲ. ನಾಪತ್ತೆಯಾದ 119 ಮಹಿಳೆಯರ ಪೈಕಿ 114 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಐವರು ಎಲ್ಲಿದ್ದಾರೋ ಗೊತ್ತಾಗಿಲ್ಲ.

2022ರಲ್ಲಿ ಒಟ್ಟು 155 ಕಾಣೆಯಾದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 132 ಪತ್ತೆಹಚ್ಚಲಾಗಿದೆ, 23 ಪ್ರಕರಣಗಳು ಬಾಕಿ ಇವೆ. 155 ಕಾಣೆಯಾದ ಪ್ರಕರಣಗಳಲ್ಲಿ 44 ಪುರುಷರಿದ್ದು, ಅವರಲ್ಲಿ 31 ಮಂದಿಯನ್ನು ಪತ್ತೆಹಚ್ಚಲಾಗಿದೆ. ಇನ್ನು 13 ಮಂದಿ ಪತ್ತೆಯಾಗಿಲ್ಲ. ನಾಪತ್ತೆಗಿರುವ 111 ಮಹಿಳೆಯರಲ್ಲಿ 101 ಮಂದಿಯನ್ನು ಪತ್ತೆಹಚ್ಚಿ, 10 ಮಹಿಳೆಯರನ್ನು ಹುಡುಕಬೇಕಿದೆ.

2023ರ ಜೂನ್‌ 30ರ ವೇಳೆಗೆ ಒಟ್ಟು 69 ಮಂದಿ ಕಾಣೆಯಾಗಿದ್ದು, 35 ಮಂದಿಯನ್ನು ಮನೆಗೆ ಕರೆತರಲಾಗಿದೆ. ಇನ್ನು 34 ಮಂದಿಯ ಇರುವಿಕೆ ತಿಳಿದುಬಂದಿಲ್ಲ. 69 ನಾಪತ್ತೆ ಪ್ರಕರಣಗಳ ಪೈಕಿ ಮಹಿಳೆಯರ ಸಂಖ್ಯೆ 46 ಇದೆ. ಇದರಲ್ಲಿ 26 ಮಹಿಳೆಯರು ಪತ್ತೆಯಾಗಿದ್ದು, ಇನ್ನು 20 ಮಂದಿ ಸಿಕ್ಕಿಲ್ಲ. ಪುರುಷರ 23 ಪ್ರಕರಣಗಳಲ್ಲಿ 9 ಮಂದಿ ಪತ್ತೆಯಾಗಿದ್ದು, ಒಂಬತ್ತು ಮಂದಿ ಸಿಕ್ಕಿಲ್ಲ ಎನ್ನುತ್ತವೆ ಡಿಸಿಆರ್‌ಬಿ ಅಂಕಿಅಂಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT