ಚಿಂಚೋಳಿ: ಪಟ್ಟಣದ ಆರಾಧ್ಯದೇವ ಮಹಾಂತೇಶ್ವರ ಮಠದಲ್ಲಿ ಸೋಮವಾರ ಪುಣ್ಯಾರಾಧನೆಯ ಪ್ರಯುಕ್ತ ಜಾತ್ರೆಯ ಸಡಗರದಿಂದ ನಡೆಯಿತು.

ಒಂದು ವಾರದಿಂದ ಶ್ರೀಮಠದಲ್ಲಿ ಮಹಾಶಿವಯೋಗಿ ಮಹಾಂತೇಶ್ವರರ ಪುಣ್ಯಾರಾಧನೆ ಅಂಗವಾಗಿ ನಡೆಯುತ್ತಿದ್ದ ಭಜನೆ ಸಪ್ತಾಹ ಸಮಾರೋಪ ಬೆಳಿಗ್ಗೆ 8 ಗಂಟೆಗೆ ಸಂಪ್ರದಾಯದಂತೆ ನಡೆಸಲಾಯಿತು, ನಂತರ ಸಾವಿರಾರು ಸುಮಂಗಲೆಯರಿಂದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ನೀರು ತುಂಬಿಕೊಂಡು, ಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಆಗಮಿಸಿ ಗದ್ದುಗೆ ಅಭಿಷೇಕ ನಡೆಸಿದರು.

ಇಡಿ ದಿನ ಪ್ರಸಾದ ಸವಿದ ಭಕ್ತರು, ಸಂಜೆಗೆ ಅಲಂಕೃತ ಟ್ರಾಕ್ಟರ್ನಲ್ಲಿ ಮಹಾಂತೇಶ್ವರ ಭಾವಚಿತ್ರದ ಮೆರವಣಿಗೆ ಭಜನೆ, ಪುರವಂತರ ಶಸ್ತ ಪ್ರಯೋಗ ಹಾಗೂ ತೆಲಂಗಾಣದ ಸಂಪ್ರದಾಯಿಕ ತಮಟೆ ಕಲಾವಿದರು ಹಾಗೂ ಡೊಳ್ಳು ಕಲಾವಿದ ಸೇವೆ ಇಡಿ ಉತ್ಸವದ ಕಳೆ ಹೆಚ್ಚಿಸಿತು.

ಮೆರವಣಿಗೆಯು ಮಹಾಂತೇಶ್ವರ ಮಠದಿಂದ ಪ್ರಾರಂಭವಾಗಿ ಧನಗಲ್ಲಿ, ಹಿರೇ ಅಗಸಿ, ಹಾರಕೂಡ ಚನ್ನಬಸವ ಶಿವಯೋಗಿ ಮಠದ ಮೂಲಕ ಮಹಾಂತೇಶ್ವರ ಮಠಕ್ಕೆ ಆಗಮಿಸಿದ ನಂತರ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಪಲ್ಲಕ್ಕಿ ತಮ್ಮ ಮನೆಯ ಮುಂದೆ ಬರುತ್ತಿದ್ದಂತೆ ಭಕ್ತರು ತುಂಬಿದ ಕೊಡದ ನೀರು ಪಲ್ಲಕ್ಕಿ ಬರುವ ದಾರಿಯಲ್ಲಿ ಹಾಕಿ ತೆಂಗಿನಕಾಯಿ ಅರ್ಪಿಸಿ ಮಹಾಂತೇಶ್ವರ ದರ್ಶನ ಮಾಡುತ್ತಿರುವುದು ಗೋಚರಿಸಿತು.

ಉತ್ಸವದಲ್ಲಿ ಶ್ರೀಮಠದ ಭಕ್ತರಾದ ಸಂಗಪ್ಪ ಪಾಲಾಮೂರ, ಶಾಂತವೀರ ಸುಂಕದ್, ಶಂಕರಗೌಡ ಅಲ್ಲಾಪುರ, ಶಶಿಧರ ಯಲಾಲ, ದತ್ತು ಕಳಸ್ಕರ್, ಸಚ್ಚಿದಾನಂದ ಸುಂಕದ, ಸಂತೋಷ ಗಡಂತಿ, ರವಿಕಾಂತ ಹುಸೇಬಾಯಿ, ಕಿರಣ ಪಂಚಾಳ, ಸಂಕೇತ ಬಬಲಾದ, ನಾಗರಾಜ ಮಲಕೂಡ, ಚನ್ನು ಏದಲ್, ವಿಜಯಕುಮಾರ ಜೋಗದ್, ಚನ್ನವೀರ ಖಾನಾಪುರ, ಮಧುಕರ ಕೊಳ್ಳೂರುಕರ್, ನಾಗೇಶ ಭದ್ರಶೆಟ್ಟಿ, ಕಮಲಾಕರ ಸಜ್ಜನ, ಕಾಶಪ್ಪ ಗಿರಿಗಿರಿ, ಶರಣಪ್ಪ ಹಲಚೇರಿ, ಬಸಣ್ಣ ಸುಂಕದ, ಸಿದ್ರಾಮಪ್ಪ ಕಡಗದ, ಮಹಾಂತೇಶ ಮಜ್ಜಗಿ, ಸೋಮಯ್ಯ ಮಠಪತಿ, ವಿಠಲ ಬಡಿಗೇರ.ರಾಜಶೇಖರ ಮಜ್ಜಗಿ, ಸಂಗಮೇಶ ಮಾಲಿ, ಜಗಪ್ಪ ಹಲಚೇರಿ, ವೀರೇಂದ್ರ ಜಾಬಶೆಟ್ಟಿ, ವಿಠಲ ಚಿಂತಲ್, ಶ್ರೀನಿವಾಸ ಬಂಡಿ, ಗುಂಡಪ್ಪ ಬಿರಾಪುರ, ನಾರಾಯಣ ಗುಣಾಜಿ, ನಾಗಣ್ಣ ಗುಣಾಜಿ, ಸಂತೋಷ ಸೀಳಿನ್, ಸಂತೋಷ ಕಡಗದ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.