ಶುಕ್ರವಾರ, 29 ಆಗಸ್ಟ್ 2025
×
ADVERTISEMENT
ADVERTISEMENT

ರಾಷ್ಟ್ರೀಯ ವಿಚಾರ ಸಂಕಿರಣ: ಉತ್ತರ– ದಕ್ಷಿಣ ಬೆಸೆದ ಬಹಮನಿಯರು

Published : 26 ಜುಲೈ 2025, 7:08 IST
Last Updated : 26 ಜುಲೈ 2025, 7:08 IST
ಫಾಲೋ ಮಾಡಿ
Comments
ನಾಣ್ಯ ಸಂಗ್ರಹಕಾರ ಹಸನ್‌ ಕನಕಲ್‌ ಅವರು ಸಂಗ್ರಹಿಸಿದ ಬಹಮನಿ ಸುಲ್ತಾನರ ಕಾಲದ ನಾಣ್ಯಗಳನ್ನು ವಿದ್ಯಾರ್ಥಿನಿಯರು ವೀಕ್ಷಿಸಿದರು  ಪ್ರಜಾವಾಣಿ ಚಿತ್ರ 
ನಾಣ್ಯ ಸಂಗ್ರಹಕಾರ ಹಸನ್‌ ಕನಕಲ್‌ ಅವರು ಸಂಗ್ರಹಿಸಿದ ಬಹಮನಿ ಸುಲ್ತಾನರ ಕಾಲದ ನಾಣ್ಯಗಳನ್ನು ವಿದ್ಯಾರ್ಥಿನಿಯರು ವೀಕ್ಷಿಸಿದರು  ಪ್ರಜಾವಾಣಿ ಚಿತ್ರ 
ಇತಿಹಾಸ ತಿಳಿಯದೇ ಭವಿಷ್ಯ ಸಾಧ್ಯವಿಲ್ಲ. ಬಹಮನಿಗಳು ಈ ಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ವಿಚಾರ ಸಂಕಿರಣದಿಂದ ಇನ್ನಷ್ಟು ವಿಷಯಗಳು ಹೊರಹೊಮ್ಮಲಿ
ಶಶೀಲ್‌ ಜಿ. ನಮೋಶಿ ಎಚ್‌ಕೆಇ ಸೊಸೈಟಿ ಅಧ್ಯಕ್ಷ
ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉಪನಗರಗಳ ಕಲ್ಪನೆ ಕೊಟ್ಟಿದ್ದು ಬಹಮನಿಗಳು. ಅದಕ್ಕೆ ತಾಜಾ ಉದಾಹರಣೆ
ಸುಲ್ತಾನಪುರ ಎಸ್‌.ಕೆ.ಅರುಣಿ ಸಂಶೋಧಕ
‘ನಾಣ್ಯ ಜಗತ್ತಿಗೆ ಹೆಚ್ಚಿನ ಕಾಣಿಕೆ’
ಕ್ರಿ.ಶ.1347ರಿಂದ 1538ರವರೆಗೆ ಆಳ್ವಿಕೆ ನಡೆಸಿದ 18 ಜನ ಬಹಮನಿ ಸುಲ್ತಾನರಲ್ಲಿ 16 ಅರಸರು ನಾಣ್ಯಗಳನ್ನು ಟಂಕಿಸಿದ್ದಾರೆ. ಅದರಲ್ಲಿ 12 ಜನ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದಾರೆ. ಉಳಿದವರು ಬೆಳ್ಳಿ ತಾಮ್ರದ ನಾಣ್ಯಗಳನ್ನು ಟಂಕಿಸಿದ್ದಾರೆ. ಬಹಮನಿ ಅವಧಿಯಲ್ಲಿ ಕಲಬುರಗಿಯೇ ಪ್ರಮುಖ ಟಂಕಶಾಲೆಯಾಗಿತ್ತು ಅನ್ನೋದು ವಿಶೇಷ. ಇವರು ತಾಮ್ರದ ನಾಣ್ಯಕ್ಕೆ ಬಳಸುತ್ತಿದ್ದ ಪುಲೂಸ್‌ ಎಂಬ ಹೆಸರು ಸೌದಿ ಅರೇಬಿಯಾದಲ್ಲಿ ಚಿನ್ನದ ನಾಣ್ಯಕ್ಕೆ ಬಳಸುತ್ತಿದ್ದ ದಿನಾರ್‌ ಎಂಬುದು ಕತಾರ್‌ನಲ್ಲಿ ಈಗಲೂ ಬಳಕೆಯಲ್ಲಿರುವುದು ಮತ್ತೊಂದು ವಿಶೇಷ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT