ಸಾರಿಗೆ ಸಂಸ್ಥೆ ಭದ್ರತಾ ಸಿಬ್ಬಂದಿ ಆತ್ಮಹತ್ಯೆ
ಕಲಬುರ್ಗಿ: ಇಲ್ಲಿನ ಎನ್ಇಕೆಆರ್ಟಿಸಿ ಕಚೇರಿ ಸಾರಿಗೆ ಸದನದ ಹಿಂಭಾಗದ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ ಸಂಸ್ಥೆಯ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಯುವಕ ಸೋಮವಾರ ನೇಣಿಗೆ ಶರಣಾಗಿದ್ದಾರೆ.
ಅಫಜಲಪುರದ ನಿವಾಸಿ ನಾಗರಾಜ ರಾಜಶೇಖರ ಲೋಕಪಲ್ಲಿ (30) ಮೃತ ಯುವಕ.
ನಿತ್ಯ ಅಫಜಲಪುರದಿಂದ ಕಲಬುರ್ಗಿಗೆ ಬಂದು ಹೋಗುತ್ತಿದ್ದರು. ಎಂದಿನಂತೆ ಭಾನುವಾರ ಸಂಜೆಯೂ ಕೆಲಸಕ್ಕೆ ಹಾಜರಾಗಿದ್ದ. ಬೆಳಿಗ್ಗೆ ಸಾರ್ವಜನಿಕ ಓಡಾಟ ಹೆಚ್ಚಿರದ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.