ಕಲಬುರ್ಗಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರಿಲ್ಲದೇ ಬಸ್ಸುಗಳು ಗಂಟೆಗಟ್ಟಲೇ ಕಾದು ನಿಂತವು. ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಲು ಜನ ಆಸಕ್ತಿ ತೋರದ ಕಾರಣ ನಿಲ್ದಾಣದಲ್ಲಿ ಜನರಿಗಿಂತ ಹೆಚ್ಚು ಸಿಬ್ಬಂದಿಯೇ ಕಂಡರು.

ವಿವಿಧೆಡೆ ಸಂಚರಿಸಲು 50 ಬಸ್ಗಳು ಸಿದ್ಧವಾಗಿ ನಿಂತಿದ್ದರೂ ಪ್ರಯಾಣಿಕರು ಬರಲಿಲ್ಲ. ಬೆಳಿಗ್ಗೆ 7ರಿಂದ 11ರವರೆಗೆ ಕೇವಲ 270 ಜನ ಮಾತ್ರ ನಿಲ್ದಾಣದೊಳಗೆ ಬಂದಿದ್ದಾರೆ.

ನೆರೆಯ ಜಿಲ್ಲಾ ಕೇಂದ್ರಗಳಾದ ಬೀದರ್, ವಿಜಯಪುರ, ಯಾದಗಿರಿಗೆ ಹಾಗೂ ತಾಲ್ಲೂಕು ಕೇಂದ್ರಗಳಾದ ಆಳಂದ, ಚಿತ್ತಾಪುರ, ಕಾಳಗಿ, ಸುರಪುರ, ಲಿಂಗಸೂರುಗಳಿಗೆ ತಲಾ ಒಂದು ಬಸ್ ಮಾತ್ರ ಸಂಚರಿಸಿದೆ.

ಕೋವಿಡ್-19 ಸೋಂಕಿತರು ಕಂಡುಬಂದ ಚಿಂಚೋಳಿ, ಕಮಲಾಪುರ, ಸೇಡಂ ತಾಲ್ಲೂಕುಗಳಿಗೆ ಹೋಗಲು ಸಿದ್ಧವಾದ ಬಸ್ಸುಗಳು ಒಬ್ಬರೂ ಪ್ರಯಾಣಿಕರಿಲ್ಲದೇ ಖಾಲಿಯೇ ನಿಂತವು.

ಒಂದು ಬಸ್ಸಿನಲ್ಲಿ ಕನಿಷ್ಠ 25ರಿಂದ 30 ಜನ ತುಂಬಿದರೆ ಮಾತ್ರ ಓಡಿಸುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಹಾಗಾಗಿ, ಸುಮಾರು 50 ಬಸ್ಸುಗಳು ನಿಲ್ದಾಣದಲ್ಲೇ ಠಿಕಾಣಿ ಹೂಡಿದವು.

ಕಲಬುರ್ಗಿ ಬಸ್ ನಿಲ್ದಾಣದೊಳಗೆ ಬಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸಿಬ್ಬಂದಿ.

ಕಲಬುರ್ಗಿ ಬಸ್ ನಿಲ್ದಾಣದೊಳಗೆ ಬಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.