ಕಲಬುರಗಿ: ಜಿಲ್ಲೆಗೆ ಬಂದ ಉದ್ಯಮಿಗಳು ಮತ್ತು ಉದ್ಯೋಗಿಗಳು ಕನ್ನಡ ಕಲಿಯಬೇಕು ಮತ್ತು ಕನ್ನಡದಲ್ಲಿ ವ್ಯವಹಾರ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಶ್ರೀಶೈಲ ನಾಗರಾಳ ಸಲಹೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕಲಬುರಗಿ ಜಿಲ್ಲೆ ಆಧುನಿಕವಾಗಿ ಬಹಳಷ್ಟು ಬೆಳೆದಿದೆ. ಉದ್ದಿಮೆ, ಕಚೇರಿ, ಬ್ಯಾಂಕ್ಗಳಿವೆ. ಹೊರಗಿನಿಂದ ಉದ್ಯಮಿಗಳು, ಉದ್ಯೋಗಿಗಳೂ ಬಂದಿದ್ದಾರೆ. ಅವರು ಕಲಬುರಗಿಯ ಮತ್ತು ಕನ್ನಡದ ಅನ್ನ ಉಣ್ಣುತ್ತೇನೆ, ಬದುಕುತ್ತಿದ್ದೇನೆ ಎನ್ನುವ ಮನೋಭಾವದಿಂದ ಕನ್ನಡವನ್ನು ಕಲಿಯುವ, ಕನ್ನಡದಲ್ಲಿ ವ್ಯವಹರಿಸುವ ಮನಸ್ಸು ಮಾಡಬೇಕು. ಈ ದಿಸೆಯಲ್ಲಿ ಕನ್ನಡಪರ ಸಂಸ್ಥೆಗಳು ಕೆಲಸ ಮಾಡಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹೇಳಿದಂತೆ ಜಿಲ್ಲೆಯ ಲೇಖಕರ ಕೃತಿಗಳ ಸಗಟು ಖರೀದಿ ಮಾಡಬೇಕು. ರಾಜ್ಯ ಗ್ರಂಥಾಲಯ 2021ರಿಂದ ಕನ್ನಡ ಪುಸ್ತಕಗಳನ್ನು ಆಯ್ಕೆ ಮಾಡಿ ಅನುದಾನ ಬಿಡುಗಡೆ ಮಾಡದೇ ತಡೆ ಹಿಡಿದಿದೆ. ಶೀಘ್ರ ಅನುದಾನ ಕೊಡಬೇಕು’ ಎಂದು ಒತ್ತಾಯಿಸಿದರು.

‘ಕಲಬುರಗಿಯ ಲೇಖಕರು, ಸಾಧಕರ ಹೆಸರುಗಳನ್ನು ಇಲ್ಲಿಯ ಸಂಸ್ಥೆ, ಮಾರ್ಗ, ಭವನಗಳಿಗೆ ಇಡುವ ಮೂಲಕ ಗೌರವ ನೀಡಬೇಕು. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತ ಲೇಖಕರ ಸಾಧನೆ ಗುರುತಿಸಿ ಗೌರವಿಸಬೇಕು’ ಎಂದರು.

ಹುಟ್ಟೂರು ಸಿಂದಗಿ, ಕರ್ಮಭೂಮಿ ಕಲಬುರಗಿಯ ಬಂಧವನ್ನು ನೆನಪಿಸಿಕೊಂಡ ಶ್ರೀಶೈಲ ನಾಗರಾಳ, ತಮ್ಮ ಗುರುಗಳ ಹೆಸರುಗಳನ್ನು ಪ್ರಸ್ತಾಪಿಸಿದರು. ಕಲಬುರಗಿ ಹೆಸರಿನ ಇತಿಹಾಸ ತಿಳಿಸಿ, ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮುಂತಾದವರ ಆಳ್ವಿಕೆಯಲ್ಲಿನ ಪ್ರಾಚೀನ ಸಾಹಿತ್ಯ ಸಂಸ್ಕೃತಿ ತೆರೆದಿಟ್ಟರು. ‘ಕ್ರಿ.ಶ. 850ರಲ್ಲಿ ರಚಿತ ಕನ್ನಡದ ಆದ್ಯ ಗ್ರಂಥ ‘ಕವಿರಾಜ ಮಾರ್ಗ’ ಸೌಹಾರ್ದದ ಬದುಕನ್ನು ಕಲಿಸಿದೆ. ಆದಿಕವಿ ಪಂಪ, ಪೊನ್ನ, ರನ್ನ, ದುರ್ಗಸಿಂಹ, ಸೋಮೇಶ್ವರ, ವಿಜ್ಞಾನೇಶ್ವರ ಈ ಪರಿಸರದವರಾದ್ದರಿಂದ ಕವಿರಾಜ ಮಾರ್ಗ ಪೂರ್ವದಲ್ಲಿ ಕನ್ನಡದ ನೂರಾರು ಗ್ರಂಥಗಳು ಈ ಪ್ರದೇಶದಲ್ಲಿ ರಚನೆ ಆಗಿರಬೇಕು’ ಎಂದು ಅಭಿಪ್ರಾಯಪಟ್ಟರು.

‘ದಿ.ವೈಜನಾಥ ಪಾಟೀಲ, ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ಕಲಂ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.

ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ.ಪೋತೆ ಅವರು ಶ್ರೀಶೈಲ ನಾಗರಾಳರ ‘ಜಾನಪದ ಸಮಾಜೋ ಸಂಸ್ಕೃತಿ’ ಕೃತಿ ಲೋಕಾರ್ಪಣೆಗೊಳಿಸಿ, ‘ಕಲ್ಯಾಣ ಕರ್ನಾಟಕ ಹೊರತುಪಡಿಸಿ ರಾಜ್ಯದಲ್ಲಿ 27 ಪ್ರತಿಷ್ಠಾನಗಳು ಇವೆ. ಆದರೆ, ಸರ್ಕಾರಕ್ಕೆ ಪತ್ರ ಸೇರಿದಂತೆ ಅನೇಕ ರೀತಿಯ ಹೋರಾಟ ಮಾಡಿದರೂ ಈ ಭಾಗಕ್ಕೆ ಇಲ್ಲಿಯವರೆಗೂ ಒಂದು ಸಣ್ಣ ಪ್ರತಿಷ್ಠಾನ ಬಂದಿಲ್ಲ’ ಎಂದು ಬೇಸರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಶಿವಲೀಲಾ ಎಸ್.ಕಲಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಚನ್ನಪ್ಪ ಕಟ್ಟಿ ಉದ್ಘಾಟಿಸಿದರು. ಹೂವಾನಂದ ಸಲಗಾರ ಅವರ ‘ಜಗದ ಜನಕ’ ಕೃತಿಯನ್ನು ಸಾಹಿತ್ಯ ಪ್ರೇರಕಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ ರೇವೂರ ಬಿಡುಗಡೆ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವ ವಹಿಸಿದ್ದರು. ಗಿರಿಜಾ ಶ್ರೀಶೈಲ ನಾಗರಾಳ, ಸ್ವಾಗತ ಸಮಿತಿ ಅಧ್ಯಕ್ಷ ದಯಾನಂದ ದೇವರಮನಿ, ಕಾರ್ಯಾಧ್ಯಕ್ಷ ವಿಶ್ವನಾಥ ಎನ್.ಹುಲಿ, ಕುಪೇಂದ್ರ ಬರಗಾಲಿ ಇದ್ದರು.

ಮಲ್ಲಿಕಾರ್ಜುನ ಇಬ್ರಾಹಿಂಪುರ ಸ್ವಾಗತಿಸಿದರು. ವಿಶಾಲಾಕ್ಷಿ ಮಾಯಣ್ಣವರ ನಿರೂಪಿಸಿದರು.

ಸಂಸ್ಕಾರ ಉಳಿಸುವವರೇ ಹೆಣ್ಣುಮಕ್ಕಳು. ಮನೆಯಿಂದಲೇ ಕನ್ನಡ ಕಲಿಕೆ ಆರಂಭವಾಗಬೇಕು. ಮಕ್ಕಳಲ್ಲಿ ಸಂಬಂಧಗಳ ಅರಿವು ಮೂಡಿಸಬೇಕು.
– ಪ್ರಮೀಳಾ ಜಾನಪ್ಪಗೌಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ

ನಾನು ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದಲ್ಲೇ ಆದರೂ ಮದುವೆಯಾಗಿ ಕಲಬುರಗಿಗೆ ಬಂದ ನಂತರ ಕನ್ನಡ ಮಾತನಾಡಲು ಬರೆಯಲು ಕಲಿತಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ.
– ಜಯಶ್ರೀ ಬಸವರಾಜ ಮತ್ತಿಮಡು, ಸಾಹಿತ್ಯ ಪ್ರೇರಕಿ

ಕನ್ನಡ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕು ಎಂದರೆ ಇಂಥ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು. ಕನ್ನಡವನ್ನು ಅಂತರರಾಷ್ಟ್ರೀಯ ಭಾಷೆಯಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
– ಲಕ್ಷ್ಮಿ ದತ್ತಾತ್ರೇಯ ಪಾಟೀಲ ರೇವೂರ, ಸಾಹಿತ್ಯ ಪ್ರೇರಕಿ

‘ಕಲ್ಯಾಣ ಕರ್ನಾಟಕ ಸಂಘರ್ಷದ ನೆಲ’

‘ಬ್ರಿಟಿಷ್ ವಸಾಹತುಶಾಹಿ ಮತ್ತು ನಿಜಾಮಶಾಹಿಯಿಂದ ಬಿಡುಗಡೆಗೆ ನಂತರದಲ್ಲಿ ಏಕೀಕರಣ ಮತ್ತು 371(ಜೆ) ಕಲಂ ಜಾರಿಗಾಗಿ ನಿರಂತರ ಹೋರಾಟ ನಡೆಸಿದ ಕಲ್ಯಾಣ ಕರ್ನಾಟಕ ಅತ್ಯಂತ ಸಂಘರ್ಷದ ನೆಲವಾಗಿದೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

‘ಒಂದು ಸಮಾಜ ಇನ್ನೊಂದು ಸಮಾಜ ಕಂಡರೆ ಆಗಲಾರದ ಸಂದರ್ಭದಲ್ಲಿ ನಾವಿದ್ದೇವೆ. ಅನನ್ಯ ಮತ್ತು ವಿಶೇಷವಾಗಿರುವ ಈ ನೆಲದ ಧ್ವನಿ ಸಾಂಸ್ಕೃತಿಕ ಮೌಲ್ಯಗಳು ಇಡೀ ರಾಜ್ಯ ದೇಶಕ್ಕೆ ಮಾದರಿಯಾಗಿವೆ. ಪರಮತ ಪರಧರ್ಮದೊಂದಿಗೆ ಸೈರಣೆಯಿಂದ ಬದುಕಬೇಕೆಂದು ಶ್ರೀವಿಜಯ ಹೇಳಿದರೆ 12ನೇ ಶತಮಾತನದ ಬಸವಾದಿ ಶರಣರು ಕಾಯಕ ಎಂಬ ದೊಡ್ಡ ಮೌಲ್ಯವನ್ನು ವಿಶ್ವಕ್ಕೆ ಕೊಟ್ಟಿದ್ದಾರೆ’ ಎಂದು ಬಣ್ಣಿಸಿದರು.

‘ಸಾಹಿತ್ಯ ಮಾರಾಟದ ಉತ್ಪನ್ನವಾದರೆ ನಿಂತು ಹೋಗುತ್ತದೆ. ಸಾಹಿತ್ಯ ಪ್ರಾಡಕ್ಟ್ ಆಗುವ ಬದಲು ಅದೊಂದು ನಿರಂತರ ಪ್ರಕ್ರಿಯೆ ಆಗಬೇಕು. ಲೇಖಕನಿಂದ ಓದುಗನಿಗೆ ಓದುಗನಿಂದ ಕೇಳುಗನಿಗೆ ಹೀಗೆ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ನಗರದ ಮಿನಿವಿಧಾನಸೌಧದಿಂದ ಎಸ್ವಿಪಿ ವೃತ್ತದ ಮಾರ್ಗವಾಗಿ ಕನ್ನಡ ಭವನದ ವರೆಗೆ ಸಮ್ಮೇಳನಾಧ್ಯಕ್ಷ ಶ್ರೀಶೈಲ ನಾಗರಾಳ ಅವರನ್ನು ಅಲಂಕೃತ ಸಾರೋಟ ವಾಹನದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಉಪ ಮೇಯರ್ ತೃಪ್ತಿ ಶ್ರೀನಿವಾಸ ಲಾಖೆ ಚಾಲನೆ ನೀಡಿದರು. ಮಕ್ಕಳು ಕನ್ನಡ ತಾಯಿ ಭುವನೇಶ್ವರಿ ಸೇರಿದಂತೆ ಬಸವಾದಿ ಶರಣರು ಸಂತರ ವೇಷಭೂಷಣಗಳಲ್ಲಿ ಗಮನ ಸೆಳೆದರು. ಮಕ್ಕಳ ಲೇಜಿಮ್ ಡೊಳ್ಳಿನ ಕಲಾವಿದರು ಮೆರವಣಿಗೆಗೆ ಮೆರುಗು ತಂದರು. ಕನ್ನಡಪರ ಫಲಕಗಳು ಕನ್ನಡ ಧ್ವಜಗಳು ರಾರಾಜಿಸಿದವು.

ಬೇಯದ ಅನ್ನ ತಿಳಿ ಸಾರು...

ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆ ಮಕ್ಕಳು ಮತ್ತು ಕನ್ನಡಾಭಿಮಾನಿಗಳು ಊಟದ ಸ್ಥಳಕ್ಕೆ ಬರುತ್ತಿದ್ದಂತೆ ಅನ್ನ ಖಾಲಿಯಾಗಿತ್ತು. ಅರ್ಧ ಗಂಟೆ ಬಳಿಕ ಮತ್ತೆ ಅನ್ನ–ಸಾಂಬಾರು ವ್ಯವಸ್ಥೆ ಮಾಡಲಾಯಿತು. ಈ ವೇಳೆ ಅನೇಕರು ‘ಬೇಯದ ಅನ್ನ ತಿಳಿ ಸಾರು ನೀಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಆಯೋಜಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಹೊತ್ತಿಗೆ ಮತ್ತೆ ಅನ್ನ ಖಾಲಿ ಆಯ್ತು! ತಟ್ಟೆ ಹಿಡಿದುಕೊಂಡು ಪಾಳಿಯಲ್ಲಿ ನಿಂತಿದ್ದ ಹಲವು ಜನ ಅಸಮಾಧಾನ ವ್ಯಕ್ತಪಡಿಸುತ್ತಾ ಅಲ್ಲಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.