ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂಗೆ ನೋಟಿಸ್‌ ಖಂಡಿಸಿ ಆ.5ರಂದು ಪ್ರತಿಭಟನೆ: ಗುರುನಾಥ

Published : 3 ಆಗಸ್ಟ್ 2024, 15:42 IST
Last Updated : 3 ಆಗಸ್ಟ್ 2024, 15:42 IST
ಫಾಲೋ ಮಾಡಿ
Comments

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್‌ ಜಾರಿ ಮಾಡಿರುವುದನ್ನು ವಿರೋಧಿಸಿ ಆ.5ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥ ಎಸ್‌. ಪೂಜಾರಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಕಾಂಗ್ರೆಸ್‌ ಶಾಸಕರು, ಜನಪ್ರತಿನಿಧಿಗಳ ಬೆಂಬಲದೊಂದಿಗೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮಾನವ ಸರಪಳಿ ರಚಿಸುತ್ತೇವೆ. ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಹಲಗೆ, ಡೊಳ್ಳು ಬಾರಿಸುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ತಿಳಿಸಿದರು.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆನ್ನಲಾದ ಸೈಟ್‌ ವಿಚಾರವಾಗಿ ಅಪರಾಧ ಹಿನ್ನೆಲೆಯ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮನವಿ ಮೇರೆಗೆ ರಾಜ್ಯಪಾಲರು ಕೂಲಂಕುಷವಾಗಿ ಪರಿಶೀಲಿಸದೇ ನೋಟಿಸ್‌ ನೀಡಿದ್ದಾರೆ. ಇದು ಹಿಂದುಳಿದ ವರ್ಗದ ನೇತಾರನನ್ನು ತುಳಿಯುವ ಹುನ್ನಾರ’ ಎಂದು ದೂರಿದರು.

‘ಇನ್ನೂ ಕಾಲ ಮಿಂಚಿಲ್ಲ. ರಾಜ್ಯಪಾಲರು ದ್ವೇಷದ ರಾಜಕಾರಣಕ್ಕೆ ಒಳಗಾಗದೇ ನೋಟಿಸ್‌ ವಾಪಸ್‌ ಪಡೆಯಬೇಕು. ಇಲ್ಲವಾದಲ್ಲಿ ನಾವು ಜೈಲ್‌ ಭರೋ ಚಳವಳಿ ನಡೆಸಲು ಕೂಡ ಹಿಂಜರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಪ್ರಮುಖರಾದ ತಿಪ್ಪಣ್ಣ ಎಸ್‌.ಗುಂಡಗುರ್ತಿ, ಸಾಯಿಬಣ್ಣ ಪೂಜಾರಿ ಮಲ್ಲಾಬಾದ್‌, ಭಗವಂತರಾಯಗೌಡ ಪಾಟೀಲ, ಗಣಪತಿ ಮಿಣಜಗಿ, ಈರಣ್ಣ ಝಳಕಿ, ನಿರ್ಮಲಾ ಎಸ್‌. ಬರಗಾಲಿ, ಶಿವಲಿಂಗಪ್ಪ ಎಂ.ವಗ್ಗಿ, ಮಹೇಶ ಧರಿ, ಧರ್ಮರಾಜ ಹೇರೂರ, ನಾಗೇಂದ್ರಪ್ಪ ಪೂಜಾರಿ, ಕಾಶಿನಾಥ ಮರತೂರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT