ಜೇವರ್ಗಿ: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆರಾಯ ತಂಪೆರದಿದ್ದಾನೆ. ಪಟ್ಟಣದಲ್ಲಿ ಮಂಗಳವಾರ ಸಂಜೆ 5ಕ್ಕೆ ಆರಂಭವಾದ ಮಳೆಯು ಒಂದು ತಾಸಿಗೂ ಅಧಿಕ ಅವಧಿವರೆಗೆ ಸುರಿಯಿತು.

ಇಡೀ ದಿನ ಬಿಸಿಲ ಧಗೆಯಿಂದ ಜನರಿಗೆ ಸಾಕಾಗಿತ್ತು. ಸಂಜೆ ಸುರಿದ ಮಳೆ ತಂಪೆರೆಯಿತು. ಬಿಸಿಲಿನ ತಾಪಮಾನ ದಿನೆ ದಿನೇ ಹೆಚ್ಚುತ್ತಿದೆ. ಈಗಾಗಲೇ 43-44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬರಲಾಗುತ್ತಿಲ್ಲ. ಬೆಳಿಗ್ಗೆ 9 ಗಂಟೆಯಿಂದಲೇ ಬಿಸಿಲಿನ ತಾಪ ಇರುವುದರಿಂದ ಜನ ಸಂಜೆ ಮಾತ್ರ ಹೊರಗಡೆ ಒಡಾಡುತ್ತಿದ್ದಾರೆ.

ಕಾದ ಹೆಂಚಿನಂತಾಗಿದ್ದ ಭೂಮಿಗೆ ಮಳೆಯ ಹನಿಗಳ ಸ್ಪರ್ಶವಾಯಿತು. ಇಡೀ ದಿನ ಉರಿ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಸಂಜೆ ಹೊತ್ತಿಗೆ ಸುರಿದ ಮಳೆ ತುಸು ತಂಪೆರೆಯಿತು. ಧಗೆಯಿಂದ ಕಂಗೆಟ್ಟಿದ್ದ ಜನರು ಮಳೆಯ ಹನಿಗಳ ಕಂಡು ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.