ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ಆದಿತ್ಯನಾಥ ರಾಜೀನಾಮೆ ಕೊಡಲಿ: ಡಾ.ಶರಣಪ್ರಕಾಶ ಪಾಟೀಲ

Last Updated 9 ಅಕ್ಟೋಬರ್ 2020, 7:29 IST
ಅಕ್ಷರ ಗಾತ್ರ

ಸೇಡಂ:(ಕಲಬುರ್ಗಿ ಜಿಲ್ಲೆ): ‘ಉತ್ತರ ಪ್ರದೇಶದ ಯುವತಿಯ ಮೇಲೆ ನಡೆದ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ ಕೂಡಲೇ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಎದುರು ಆಯೋಜಿಸಿದ್ಧ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅತ್ಯಾಚಾರಕ್ಕೆ ಒಳಗಾದ ಯುವತಿಯ ಕುಟುಂಬ ದವರನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ ಅವರನ್ನು ತಡೆದ ಸರ್ಕಾರ ಅಮಾನವೀಯ ರೀತಿಯಲ್ಲಿ ವರ್ತನೆ ಮಾಡಿದೆ. ಅಲ್ಲದೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾತ್ರೋ ರಾತ್ರಿ ಯುವತಿಯ ದೇಹವನ್ನು ಸುಟ್ಟು ಅಮಾನವೀಯ ರೀತಿಯಲ್ಲಿ ವರ್ತಿಸಿದೆ. ಅತ್ಯಾಚಾರಿಗಳನ್ನು ಶಿಕ್ಷಿಸದ ಸರ್ಕಾರ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ ಅವರಿಗೆ ಈ ಘಟನೆಗೆ ಸಂಬಂಧಿಸಿದಂತೆ ಸೂಚನೆ ಕೊಡಬೇಕಿತ್ತು. ಪ್ರಧಾನಿಯೇ ಮೌನ ವಹಿಸಿರುವುದು ನಾಚಿಕೇಡಿತನ' ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಮಾಸ್ಕ್ ಧರಿಸಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಮೌನ ಸತ್ಯಾಗ್ರಹ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿ ಪಾಟೀಲ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಕಾಂಗ್ರೆಸ್‌ ಮುಖಂಡ ರಾಜಶೇಖರ್ ಪುರಾಣಿಕ್, ಸುಭಾಶ್ಚಂದ್ರ ನಿಷ್ಠಿ, ಹೇಮಾರೆಡ್ಡಿ ಕಲಕಂಭ, ಜಗನ್ನಾಥ ಚಿಂತಪಳ್ಳಿ, ಸತೀಶ ಪೂಜಾರಿ, ಅನಂತಯ್ಯ ಮುಸ್ತಾಜರ್, ವಿಲಾಸ್ ಗೌತಂ, ಸಿದ್ದು ಬಾನಾರ್, ಭೀಮರಾವ ಅಳ್ಳೊಳ್ಳಿ, ಅಶೋಕ ದಂಡೋತಿ, ನಾಗರಾಜ ನಂದೂರ, ಅಂಕಿತ್ ಜೋಶಿ, ವೀರೇಂದ್ರ ರುದ್ನೂರ, ಮಹಾದೇವಪ್ಪ ಪೊಲೀಸ್ ಪಾಟೀಲ, ರಷೀದ್ ರಂಜೋಳ, ಮಾರುತಿ ಮುಗುಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT