ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಶರಣಬಸವೇಶ್ವರ ದೇವಸ್ಥಾನದ ಆವರಣದ ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಡಿ.14ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ ಎಂದು ಶರಣಬಸವ ವಿವಿ ಕುಲಾಧಿಪತಿ ದಾಕ್ಷಾಯಣಿ ಎಸ್. ಅಪ್ಪ ಹೇಳಿದರು.

‘ಪ್ರತಿ ಸಲದಂತೆ ಈ ಸಲವೂ ಮೂವರು ಸಾಧಕ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ. ಖಾಜಾ ಬಂದಾನವಾಜ್ ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಮುತ್ಯಾನ ಬಬಲಾದ ಗುರು ಚೆನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿ ಗುರುಪಾದಲಿಂಗ ಶಿವಯೋಗಿ ಹಾಗೂ ಎಚ್ಕೆಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು’ ಎಂದು ವಿ.ವಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಸಾನ್ನಿಧ್ಯ ವಹಿಸುವರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಲ್.ಪಾಟೀಲ ಘಟಿಕೋತ್ಸವ ಭಾಷಣ ಮಾಡುವರು. ಬೆಂಗಳೂರಿನ ಫಿಲಿಪ್ ಸ್ಯಾಮುಯೆಲ್ ಬಾಬು ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ನಾನು ಘಟಿಕೋತ್ಸವದ ಅಧ್ಯಕ್ಷತೆ ವಹಿಸುವೆ’ ಎಂದು ವಿವರಿಸಿದರು.

ಟಾಪರ್ಗಳಿಗೆ ನಗದು ಪುರಸ್ಕಾರ:

‘ಪ್ರಸಕ್ತ ಸಾಲಿನಿಂದ ಲಿ. ಶರಣಬಸವಪ್ಪ ಅಪ್ಪ ಹೆಸರಿನಲ್ಲಿ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳಾ ಟಾಪರ್ಗಳಿಗೆ ತಲಾ ₹21 ಸಾವಿರ ಮೊತ್ತದ ಎರಡು ನಗದು ಪ್ರಶಸ್ತಿಗಳು ಮತ್ತು ಪ್ರಮಾಣ ಪತ್ರ ವಿತರಿಸಲು ನಿರ್ಧರಿಸಲಾಗಿದೆ. ಅದರಂತೆ ಮೊದಲ ಪ್ರಶಸ್ತಿಗೆ ಮಹಿಳಾ ವಿಭಾಗದಲ್ಲಿ ಎಂ.ಎಸ್ಸಿ ಗಣಿತ ವಿಷಯದಲ್ಲಿ 9.95 ಸಿಜಿಪಿಎ ಗಳಿಸಿ ಪ್ರಥಮ ಸ್ಥಾನ ಪಡೆದ ಸಿಮ್ರಾನಿಶಾತ್ ಬಂದೇನವಾಜ್ ಕಲಕೇರಿ ಹಾಗೂ ಪುರುಷರ ವಿಭಾಗದಲ್ಲಿ ಬಿ.ಟೆಕ್ನಲ್ಲಿ (ಮೆಕ್ಯಾನಿಕಲ್) 9.75 ಸಿಜಿಪಿಎ ಗಳಿಸಿ ಪ್ರಥಮ ಸ್ಥಾನ ಪಡೆದ ರಾಹುಲ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ’ ಎಂದು ದಾಕ್ಷಾಯಣಿ ಎಸ್.ಅಪ್ಪ ವಿವರಿಸಿದರು.

‘ಗಣ್ಯರು ತಮ್ಮ ಆತ್ಮೀಯರ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳ ಜೊತೆಗೆ ಐದು ನಗದು ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಲಿ.ಚನ್ನಬಸಮ್ಮ ಸಿದ್ಧರಾಮಪ್ಪ ದೇಶಮುಖ ಹೆಸರಿನಲ್ಲಿ ದಾಕ್ಷಾಯಣಿ ಅಪ್ಪ ಮತ್ತು ಕೊಪ್ಪಳದ ವಿಜಯಲಕ್ಷ್ಮಿ ಮುದಗಲ್ ಸೇರಿ ಬಿಬಿಎ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹11 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ. ಲಿ. ಮಹಾದೇವಿ ನರಕೆ ಸ್ಮರಣಾರ್ಥ ಸ್ಥಾಪಿಸಲಾದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಲ್ಲಿ ಬಿಸಿಎ ವಿಭಾಗದ ಮಹಿಳಾ ಟಾಪರ್ಗೆ ಚಂದ್ರಶೇಖರ ನರಕೆ ₹10 ಸಾವಿರ ನಗದು ಬಹುಮಾನ ನೀಡಲಿದ್ದಾರೆ. ವಿ.ವಿಯ ಡೀನ್ ಲಕ್ಷ್ಮಿ ಪಾಟೀಲ ಮಾಕಾ ಅವರು ವ್ಯವಹಾರ ಅಧ್ಯಯನ ವಿಭಾಗದಲ್ಲಿ ಎಂಬಿಎ (ಸಹ-ಶಿಕ್ಷಣ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ದಿ.ಪ್ರೊ. ಬಿ.ಬಿ.ಪಾಟೀಲ ಸ್ಮರಣಾರ್ಥ ₹5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ. ಲಲಿತ ಕಲೆ ಮತ್ತು ಸಂಗೀತ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ತಲಾ ₹12 ಸಾವಿರ ಮೊತ್ತ ನಗದು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ನಿರ್ದೇಶಕ ವಿ.ಡಿ.ಮೈತ್ರಿ, ಕುಲಸಚಿವರಾದ ಎಸ್.ಜಿ.ಡೊಳ್ಳೆಗೌಡರ, ಎಸ್.ಎಚ್.ಹೊನ್ನಳ್ಳಿ, ಡೀನ್ ಲಕ್ಷ್ಮಿಪಾಟೀಲ ಮಾಕಾ ಉಪಸ್ಥಿತರಿದ್ದರು.

ಪದವಿಗೆ ಅರ್ಹತೆ ರ್ಯಾಂಕ್ ಪಟ್ಟಿ ಬಂಗಾರದ ಪದಕ ಪಡೆಯುವಲ್ಲಿ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ಮುಂಚೂಣಿಯಲ್ಲಿರುವುದು ವಿಶೇಷ
ಅನಿಲಕುಮಾರ ಬಿಡವೆ ಉಪಕುಲಪತಿ ಶರಣಬಸವ ವಿವಿ

ಮುಂದಿನ ಸಲದಿಂದ ಮಹಿಳೆಯರಿಗೂ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡುವ ಕುರಿತು ಅಗತ್ಯ ಕ್ರಮವಹಿಸಲಾಗುವುದು
ದಾಕ್ಷಾಯಣಿ ಎಸ್.ಅಪ್ಪ ಕುಲಾಧಿಪತಿ ಶರಣಬಸವ ವಿವಿ

ಹೆಣ್ಣು ಮಕ್ಕಳದೇ ಮೇಲುಗೈ

‘7ನೇ ಘಟಿಕೋತ್ಸವದಲ್ಲಿ 21 ಪಿಎಚ್.ಡಿ, 9 ಡಿಪ್ಲೊಮಾ, 28 ಕೋರ್ಸ್ಗಳ 527 ಸ್ನಾತಕೋತ್ತರ ಹಾಗೂ 1,362 ಪದವಿ ಸೇರಿದಂತೆ ಒಟ್ಟು 1,919 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದು ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಹೇಳಿದರು.

‘ಒಟ್ಟು 199 ರ್ಯಾಂಕ್ಗಳಲ್ಲಿ 152 ವಿದ್ಯಾರ್ಥಿನಿಯರಿಗೆ ಹಾಗೂ 47 ವಿದ್ಯಾರ್ಥಿಗಳಿಗೆ ದಕ್ಕಿವೆ. ಒಟ್ಟು ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಸೇರಿ ಮೂರು ವಿಭಾಗಗಳಲ್ಲಿ ಒಟ್ಟು 44 ಚಿನ್ನದ ಪದಕ ಘೋಷಣೆಯಾಗಿದ್ದು, ಅದರಲ್ಲಿ 32 ಬಂಗಾರದ ಪದಕ ಹೆಣ್ಣು ಮಕ್ಕಳಿಗೂ, 7 ಚಿನ್ನದ ಪದಕ ಗಂಡುಮಕ್ಕಳಿಗೂ ಸಿಕ್ಕಿವೆ’ ಎಂದರು.

‘ಸ್ನಾತಕ ವಿಭಾಗದಲ್ಲಿ ಪದವಿ ಪಡೆಯಲಿರುವ 527 ಮಂದಿ ಪೈಕಿ 342 ಮಂದಿ ಹೆಣ್ಣು ಮಕ್ಕಳು, 185 ಗಂಡು ಮಕ್ಕಳಿದ್ದಾರೆ. ಇದರಲ್ಲಿ 69 ರ್ಯಾಂಕ್ ಪಡೆದಿದ್ದು, ಅದರಲ್ಲಿ 59 ರ್ಯಾಂಕ್ಗಳು ಮಹಿಳೆಯರಿಗೇ ಸಂದಿವೆ. 10 ರ್ಯಾಂಕ್ ಗಂಡು ಮಕ್ಕಳಿಗೆ ದೊರೆತಿವೆ. 23 ಚಿನ್ನದ ಪದಕಗಳ ಪೈಕಿ 21 ಬಂಗಾರ ಮಹಿಳೆಯರಿಗೆ, ಎರಡು ಚಿನ್ನದ ಪದಕ ಪುರುಷರಿಗೆ ಸಿಕ್ಕಿವೆ’ ಎಂದು ವಿವರಿಸಿದರು.

‘ಸ್ನಾತಕೋತ್ತರ ವಿಭಾಗದಲ್ಲಿ ಪದವಿ ಪಡೆಯಲಿರುವ 1,362 ಮಂದಿ ಪೈಕಿ 738 ಹೆಣ್ಣು ಮಕ್ಕಳು, 624 ಗಂಡು ಮಕ್ಕಳಿದ್ದಾರೆ. ಈ ವಿಭಾಗದಲ್ಲಿ 128 ರ್ಯಾಂಕ್ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಅದರಲ್ಲಿ 91 ಹೆಣ್ಣು ಮಕ್ಕಳು, 37 ಗಂಡು ಮಕ್ಕಳಿಗೆ ಸಿಕ್ಕಿವೆ. 20 ಚಿನ್ನದ ಪದಕಗಳ ಪೈಕಿ 15 ಬಂಗಾರ ವಿದ್ಯಾರ್ಥಿನಿರಿಗೆ ಸಿಕ್ಕಿದ್ದರೆ, ಐದು ಪದಕ ವಿದ್ಯಾರ್ಥಿಗಳಿಗೆ ದಕ್ಕಿದೆ’ ಎಂದು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಫಾರ್ಮಸಿ ಇನ್ ಡಿಪ್ಲೊಮಾ ವಿಭಾಗದ 8 ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿ ಸೇರಿದಂತೆ ಎಲ್ಲ 9 ಮಕ್ಕಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ನಡೆಯಲಿದೆ. ಈ ವಿಭಾಗದಲ್ಲಿ ಎರಡು ರ್ಯಾಂಕ್, ಒಂದು ಚಿನ್ನದ ಪದಕ ಪ್ರದಾನ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.