ಅಫಜಲಪುರ: ತಾಲ್ಲೂಕಿನ ಘೋಳನೂರ ಗ್ರಾಮದ ಬಸವರಾಜ ಜಮಾದಾರ ಹಾಗೂ ಶಂಕರ್ ತೆಲ್ಲೂರು ಅವರಿಗೆ ಸೇರಿದ 16 ಎಕರೆ ಕಬ್ಬು, ಮಂಗಳವಾರ ಸಂಜೆ ಶಾರ್ಟ್ ಸರ್ಕೀಟ್ನಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬಸವರಾಜ ಹಾಗೂ ಶಂಕರ್ ಅವರು ಕೆಲಸಕ್ಕಾಗಿ ಅಫಜಲಪುರ ಪಟ್ಟಣಕ್ಕೆ ತೆರಳಿದ್ದರು. ಜಮೀನಿನ ಹತ್ತಿರದ ರೈತರು ಬಸವರಾಜ ಅವರಿಗೆ ಫೋನ್ ಕರೆ ಮಾಡಿ ಗದ್ದೆಗೆ ಬೆಂಕಿ ಬಿದ್ದ ವಿಷಯ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ 10 ಎಕರೆ ಕಬ್ಬು ಸಂಪೂರ್ಣ ಸುಟ್ಟುಹೋಗಿತ್ತು. ಆದರೆ ಶಂಕರ್ ತೆಲ್ಲೂರು ಅವರ ಕಬ್ಬಿಗೆ ಹತ್ತಿದ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಪ್ರಯತ್ನ ಮಾಡಿದ್ದರಿಂದ ಅಲ್ಪಸಲ್ಪ ಕಬ್ಬು ಉಳಿದುಕೊಂಡಿದೆ ಎಂದು ಅಲ್ಲಿ ರೈತರು ತಿಳಿಸಿದರು.

ಈ ಕುರಿತು ಬಸವರಾಜ ಅವರು, ಸುಟ್ಟ ಕಬ್ಬನ್ನು ಸಕ್ಕರೆ ಕಾರ್ಖಾನೆಯವರು ತೆಗೆದುಕೊಂಡು ಹೋಗಬೇಕು. ಜೆಸ್ಕಾಂನವರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಕಬ್ಬು ಹಾನಿಯಾದ ಬಗ್ಗೆ ಪೊಲೀಸ್ ಠಾಣೆ, ತಹಶೀಲ್ದಾರ್ ಹಾಗೂ ಜೆಸ್ಕಾಂ ಕಚೇರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.