ಕಿರುಕುಳ: ಬೆಂಕಿ ಹಚ್ಚಿಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ

ಕಲಬುರ್ಗಿ: ಹಣಕ್ಕಾಗಿ ಗಂಡನ ಮನೆಯವರ ಕಿರುಕುಳ ತಾಳಲಾರದೇ ಸ್ಟಾಫ್ ನರ್ಸ್ ಒಬ್ಬರು ಇಲ್ಲಿನ ಶಿವಾಜಿ ನಗರದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಯುಷ್ ಇಲಾಖೆಯ ಸೇಡಂನ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಇಂದಿರಾ (38) ಆತ್ಮಹತ್ಯೆಗೆ ಶರಣಾದವರು. ತಿಂಗಳಿಗೆ ₹ 50 ಸಾವಿರ ವೇತನ ಪಡೆಯುತ್ತಿದ್ದ ಇಂದಿರಾ ಮೂಲತಃ ರಾಯಚೂರು ನಗರದ ಮಕ್ತಲ್ ಪೇಟದವರು. 2002ರಲ್ಲಿ ಕಲಬುರ್ಗಿಯ ಸಿವಿಲ್ ಗುತ್ತಿಗೆದಾರ ಸಂಜೀವರೆಡ್ಡಿ ಅವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಇದೆ.
ಮತ್ತೊಂದು ಮನೆ ಕಟ್ಟಿಸುತ್ತಿದ್ದು, ಇದಕ್ಕಾಗಿ ಹಣ ತರುವಂತೆ ಸಂಜೀವರೆಡ್ಡಿ ಮತ್ತು ಮನೆಯವರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಇಂದಿರಾ ಬುಧವಾರ ರಾತ್ರಿ ಮನೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿದು ನಗರಕ್ಕೆ ಬಂದ ಇಂದಿರಾ ತಾಯಿ ಲೀಲಾವತಿ ಅವರು, ಮಗಳ ಪತಿ ಸಂಜೀವರೆಡ್ಡಿ, ತಾಯಿ ಶಾಂತಾಬಾಯಿ, ತಮ್ಮ ಪರ್ವತರೆಡ್ಡಿ, ತಮ್ಮನ ಪತ್ನಿ ರಾಧಾ ವಿರುದ್ಧ ಇಂದಿರಾ ಅವರ ತಾಯಿ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.