ಆ್ಯಪ್ ಸಮಸ್ಯೆ ಮಂಗಳವಾರ ಬಹುತೇಕ ಬಗೆಹರಿದಿದ್ದು ಸಮೀಕ್ಷೆ ಚುರುಕು ಪಡೆದಿದೆ. ಕಲಬುರಗಿ ಜಿಲ್ಲೆ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ.
– ಸೋಮಶೇಖರ ವೈ., ಸದಸ್ಯ ಕಾರ್ಯದರ್ಶಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಜಿಲ್ಲಾ ಸಮಿತಿ
ಸಮೀಕ್ಷಕರ ನಿರುತ್ಸಾಹ?
‘ಸಮೀಕ್ಷೆಗೆ ಬಳಸುವ ಆ್ಯಪ್ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಿದೆ. ಆದರೆ ಸಮೀಕ್ಷೆ ಕುರಿತು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದ ಕಾರಣ ತಡೆಯಾಜ್ಞೆ ನಿರೀಕ್ಷಿಸುತ್ತಿದ್ದ ಸಮೀಕ್ಷಕರು ಸಮೀಕ್ಷೆಯಿಂದ ಅಂತರ ಕಾಯ್ದುಕೊಂಡ ಸಾಧ್ಯತೆಯಿದೆ. ಅಲ್ಲದೇ ಒಂದೆರಡು ಸಲ ಪ್ರಯತ್ನಿಸಿ ಎರರ್ ಬಂದಾಗ ಸಮೀಕ್ಷೆಯಿಂದ ದೂರ ಉಳಿದಿರಬಹುದು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ‘ಜಿಲ್ಲೆಯಲ್ಲಿ ಮಂದಗತಿಯ ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.