ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ತಾ.ಪಂ.ಗೆ ಮೂವರೇ ಸದಸ್ಯರು!

ಶಹಾಬಾದ್‌ ತಾ.ಪಂ.: ಸ್ಥಾಯಿ ಸಮಿತಿ ಅಧ್ಯಕ್ಷೆ ಆಯ್ಕೆಗೆ ‘ನಿಯಮಾವಳಿ ಅಡ್ಡಿ’
Last Updated 1 ಡಿಸೆಂಬರ್ 2020, 20:58 IST
ಅಕ್ಷರ ಗಾತ್ರ

ಕಲಬುರ್ಗಿ: ಹೊಸದಾಗಿ ರಚನೆಯಾಗಿರುವ ಶಹಾಬಾದ್‌ ತಾಲ್ಲೂಕು ಪಂಚಾಯಿತಿ ಕೇವಲ ಮೂವರು ಸದಸ್ಯರನ್ನು ಹೊಂದಿದ್ದು,ರಾಜ್ಯದಅತಿ ಸಣ್ಣ ತಾಲ್ಲೂಕು ಪಂಚಾಯಿತಿ ಆಗಿದೆ.

ಮೂವರೂ ಮಹಿಳಾ ಸದಸ್ಯರು. ಅವರಲ್ಲಿ ಇಬ್ಬರು ಕಾಂಗ್ರೆಸ್‌ನವರು. ಒಬ್ಬರು ಬಿಜೆಪಿಯವರು. ಕೆಲತಿಂಗಳ ಹಿಂದೆ ನಡೆದಚುನಾವಣೆಯಲ್ಲಿಹೊನಗುಂಟಾ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಸಂಗೀತಾ ದೇವೇಂದ್ರ ಕಾರೊಳ್ಳಿ ಅಧ್ಯಕ್ಷೆಯಾಗಿ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಭಂಕೂರ ಕ್ಷೇತ್ರದ ಬಿಜೆಪಿ ಸದಸ್ಯೆ ವಿಜಯಲಕ್ಷ್ಮಿ ಸುರೇಶ ಚವ್ಹಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿ ಕಚೇರಿ ಆರಂಭಿಸಿದ್ದು, ಕಾರ್ಯನಿರ್ವಾಹಕ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಆದರೆ, ಅಗತ್ಯ ಸಿಬ್ಬಂದಿನೇಮಕವಾಗಬೇಕಿದೆ.

‘ಇನ್ನೊಬ್ಬ ಸದಸ್ಯೆ ಮೇರಜಾಬೇಗಂ ಶೇರ್‌ಅಲಿ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕಿದೆ. ಸ್ಥಾಯಿ ಸಮಿತಿ ರಚನೆಗೆ ಕನಿಷ್ಠ ಆರು ಜನ ಸದಸ್ಯರು ಇರಲೇಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೊಡಿಸುವ ಯತ್ನ ನಡೆದಿದೆ’ ಎಂದು ಕಾಂಗ್ರೆಸ್‌ ಮುಖಂಡ ದೇವೇಂದ್ರ ಕಾರೊಳ್ಳಿ ಹೇಳಿದರು.

‘ಪ್ರತಿ ತಾಲ್ಲೂಕು ಪಂಚಾಯಿತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ, ಕೃಷಿ ಮತ್ತು ಕೈಗಾರಿಕೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳು ಇರಬೇಕು. ಪ್ರತಿ ಸಮಿತಿಗೆ 3ರಿಂದ 5 ಸದಸ್ಯರಿರಬೇಕು. ಇಲ್ಲಿ ಹಾಲಿ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯೆ ಒಂದೊಂದು ಸ್ಥಾಯಿ ಸಮಿತಿ ಅಧ್ಯಕ್ಷರಾಗಬೇಕಾಗುತ್ತದೆ. ಆದರೆ, ಸದಸ್ಯರನ್ನು ಎಲ್ಲಿಂದ ತರುವುದು’ ಎಂದು ಪ್ರಶ್ನಿಸುತ್ತಾರೆ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರು.

ಶಹಾಬಾದ್‌ ತಾಲ್ಲೂಕಿಗೆ 12 ಗ್ರಾಮಗಳನ್ನು ಮಾತ್ರ ಸೇರಿಸಲಾಗಿದೆ.ಹಿಂದೆಚಿತ್ತಾಪುರ ತಾಲ್ಲೂಕಿನಲ್ಲಿದ್ದ ಮರತೂರ, ಹೊನಗುಂಟಾ ಹಾಗೂ ಭಂಕೂರ ತಾ.ಪಂ. ಕ್ಷೇತ್ರಗಳು ಇಲ್ಲಿಗೆ ಸೇರಿದ್ದು, ಈ ಕ್ಷೇತ್ರಗಳಸದಸ್ಯೆಯರು ಶಹಾಬಾದ್‌ನ‌ ನೂತನ ತಾ.ಪಂ. ಸದಸ್ಯೆಯರಾಗಿ ಮುಂದುವರೆದಿದ್ದಾರೆ.

‘ಶಹಾಬಾದ್‌ ತಾಲ್ಲೂಕಿಗೆ ಇನ್ನೂ 7 ಗ್ರಾಮಗಳನ್ನು ಸೇರ್ಪಡೆ ಮಾಡುವುದನ್ನುಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಸದ್ಯಕ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇವು ಸೇರಿದರೆ ಇನ್ನೂ ಎರಡು ತಾ.ಪಂ. ಕ್ಷೇತ್ರಗಳು ಸೇರ್ಪಡೆಯಾಗಲಿವೆ’ ಎಂದು ಮೂಲಗಳು ಹೇಳುತ್ತವೆ.

‘12,500 ರಿಂದ 15 ಸಾವಿರ ಜನಸಂಖ್ಯೆಗೆ ಒಬ್ಬರು ಸದಸ್ಯರು ಇರಬೇಕು. ಆ ತಾಲ್ಲೂಕಿನ ಗ್ರಾಮೀಣ ಜನಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ಇದ್ದರೂ ಕನಿಷ್ಠ 11 ಜನ ಚುನಾಯಿತ ಸದಸ್ಯರು ಇರಬೇಕು ಎಂಬುದು ನಿಯಮ. ಹಾಲಿ ಸದಸ್ಯರ ಅವಧಿ ಕೊನೆಗೊಂಡು ಹೊಸದಾಗಿ ಚುನಾವಣೆ ನಡೆಯುವ ವೇಳೆ ಕ್ಷೇತ್ರಗಳ ಸಂಖ್ಯೆಯನ್ನು 11ಕ್ಕೆ ಹೆಚ್ಚಳ ಮಾಡಲು ಅವಕಾಶ ಇದೆ’ ಎಂದು ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದರು.

***

ನಮ್ಮ ತಾಲ್ಲೂಕು ಪಂಚಾಯಿತಿಗೆ ಸರ್ಕಾರ ಇತ್ತೀಚೆಗೆ ₹ 90 ಲಕ್ಷ ಅನುದಾನ ಮಂಜೂರು ಮಾಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇವೆ

–ಸಂಗೀತಾ ಕಾರೊಳ್ಳಿ, ಶಹಾಬಾದ್‌ ತಾ.ಪಂ. ಅಧ್ಯಕ್ಷೆ

***

ಶಹಾಬಾದ್‌ ತಾ.ಪಂ.ಗೆ ಮೂವರು ಸದಸ್ಯರಿದ್ದರೂ ಪೂರ್ಣ ಪ್ರಮಾಣದ ಕಚೇರಿ ವ್ಯವಸ್ಥೆ ಇರಬೇಕಾಗುತ್ತದೆ. ಈ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆಯದ ಕಾರಣ, ನಿಯೋಜನೆ ಮೇರೆಗೆ ಅಧಿಕಾರಿ, ಸಿಬ್ಬಂದಿಯನ್ನು ಕಳಿಸಲಾಗಿದೆ

-ಡಾ. ರಾಜಾ ಪಿ. ಕಲಬುರ್ಗಿ ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT