ಜೇವರ್ಗಿ: ಪಟ್ಟಣದ ಕನಕದಾಸ ಚೌಕ್ನಲ್ಲಿರುವ ಮಾಳಿಂಗರಾಯ ದೇವಸ್ಥಾನದಲ್ಲಿ ಮಾಳಿಂಗರಾಯರ 10ನೇ ಜಾತ್ರಾ ಮಹೋತ್ಸವ ಭಾನುವಾರ ವೈಭವದಿಂದ ಜರುಗಿತು.

ಜಾತ್ರಾಮಹೋತ್ಸವದ ನಿಮಿತ್ತ ಬೆಳಿಗ್ಗೆ ಮಾಳಿಂಗರಾಯರಿಗ ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ತಾಲ್ಲೂಕು ಸೇರಿದಂತೆ ವಿವಿದ ಕಡೆಯಿಂದ ಸುಮಾರು 21 ಪಲ್ಲಕ್ಕಿಗಳು ಆಗಮಿಸಿದ್ದವು. ಬೆಳಿಗ್ಗೆ 11 ಗಂಟೆಗೆ ಪಟ್ಟಣದಲ್ಲಿ 21 ಪಲ್ಲಕ್ಕಿಗಳೊಂದಿಗೆ ಮಾಳಿಂಗರಾಯರ ಭವ್ಯ ಮೆರವಣಿಗೆ ನಡೆಯಿತು. ಉತ್ಸವದಲ್ಲಿ ನೂರಾರು ಮಹಿಳೆಯರು ಕುಂಭ ಹೋತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡೊಳ್ಳಿನ ಕುಣಿತ, ಬಾಜಾಭಜಂತ್ರಿ ಮೆರವಣಿಗೆಗೆ ರಂಗು ತಂದಿತ್ತು. ಉತ್ಸವ ನಿಮಿತ್ತ ಮಾಳಿಂಗರಾಯ ದೇವಸ್ಥಾನದಲ್ಲಿ 21 ದಿನಗಳ ಪರ್ಯಂತ ಸಂಜೆ ಅಮೋಘ ಸಿದ್ಧೇಶ್ವರರ ಪುರಾಣವನ್ನು ಗುಬ್ಬೆವಾಡದ ಶ್ರೀಕನ್ನಯ್ಯ ಮಹಾರಾಜ ನಡೆಸಿಕೊಟ್ಟರು.

ವಿವಿಧೆಡೆಯಿಂದ ಬಂದ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಳಿಂಗರಾಯ ದೇವಸ್ಥಾನದ ಸಮಿತಿ ಅಧ್ಯಕ್ಷ ಶರಣಗೌಡ ಸರಡಗಿ, ರಾಮಣ್ಣ ಪೂಜಾರಿ, ರಾಜು ರದ್ದೆವಾಡಗಿ, ತಿಪ್ಪಣ್ಣ ಕುನ್ನೂರ, ಚಂದ್ರಶೇಖರ ಕುನ್ನೂರ, ನಿಂಗಣ್ಣ ರದ್ದೆವಾಡಗಿ, ವಿಜಯಕುಮಾರ ಯಡ್ರಾಮಿ, ಕಾಮಣ್ಣ ಹಿರೇಪೂಜಾರಿ, ಹೊನ್ನಪ್ಪ ಮಡ್ಡಿ, ಮುಂಗಪ್ಪ ಹಿರೇಪೂಜಾರಿ, ಸೋಮಶೇಖರ ಸರಡಗಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.