ಚಿಂಚೋಳಿ (ಕಲಬುರಗಿ): ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆ ಹೊಂದಿರುವ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಹುಲಿ ಗಣತಿ ಆರಂಭವಾಗಿದೆ.

‘14 ಗಸ್ತುಗಳಿದ್ದು, ಫೆ.28ವರೆಗೆ ಗಣತಿ ನಡೆಯಲಿದೆ. ಪ್ರತಿ ಗಸ್ತಿನಲ್ಲಿ 5 ಕಿ.ಮೀ. ಕಾಲ್ನಡಿಗೆ ಮೂಲಕ ಸಾಗಿ ಅಲ್ಲಿ ದೊರೆಯುವ ಮಾಂಸಾಹಾರಿ ಪ್ರಾಣಿಗಳ ಮಾಹಿತಿ ದಾಖಲಿಸಲಾಗುತ್ತಿದೆ. ಗಣತಿಯಲ್ಲಿ ವನ್ಯಜೀವಿಗಳ ಹೆಜ್ಜೆ ಗುರುತು, ಹಿಕ್ಕೆಗಳು, ಕಳೇಬರ, ನೆಲ ಹಾಗೂ ಮರ ಅಗೆದಿರುವ ಕುರಿತು ಮಾಹಿತಿ ದಾಖಲಿಸಲಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

2 ಕಿ.ಮೀ ಉದ್ದದಲ್ಲಿ ಸುಣ್ಣದಿಂದ ರೇಖೆ ಹಾಕಿ ಅದರಲ್ಲಿ ವಿವಿಧ ವಿನ್ಯಾಸದ ವೃತ್ತ ಹಾಕಿ ಅದರಲ್ಲಿ ದೊರೆತ ಹಿಕ್ಕಿಗಳು, ಹುಲ್ಲು, ಸಸ್ಯ ಪ್ರಕಾರಗಳ ಮಾಹಿತಿ ದಾಖಲಿಸಲಾಗುತ್ತಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿಗಳಾದ ಸಿದ್ಧಾರೂಡ ಹೊಕ್ಕುಂಡಿ, ಭಾನುಪ್ರತಾಪಸಿಂಗ್, ಗಜಾನಂದ, ನಟರಾಜ ಹಾಗೂ ಅರಣ್ಯ ರಕ್ಷಕರಾದ ಶೇಖ ಅಮೇರ, ಮಾಳಪ್ಪ ಪೂಜಾರಿ, ಹಾಲೇಶ ಹಾಗೂ ಪ್ರಭು ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.