ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾಯುಕ್ತ ದಾಳಿ: BBMP ಸಹಾಯಕ ಆಯುಕ್ತ ಬಸವರಾಜ ಮನೆಯಲ್ಲಿ ಹುಲಿ ಉಗುರು ಪತ್ತೆ

Published 11 ಜುಲೈ 2024, 7:36 IST
Last Updated 11 ಜುಲೈ 2024, 7:36 IST
ಅಕ್ಷರ ಗಾತ್ರ

ಕಲಬುರಗಿ: ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಗ್ಗಿ ಅವರ ಕಲಬುರಗಿ ನಗರದ ಮನೆಯಲ್ಲಿ ಸುಮಾರು ₹12.50 ಲಕ್ಷ ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾದ ಬೆನ್ನಲೇ ಲೋಕಾಯುಕ್ತ ಪೊಲೀಸರಿಗೆ ಕ್ಯಾಸಿನೊ ಕಾಯಿನ್‌ಗಳ ಮತ್ತೊಂದು ಸೂಟ್ ಕೇಸ್ ಸಿಕ್ಕಿದೆ.

ಎಂಬಿ ನಗರದ ಬಸವರಾಜ ಅವರ ಮನೆಯಲ್ಲಿ ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಅವರ ನೇತೃತ್ವದ ಅಧಿಕಾರಿಗಳ ತಂಡ ಬೆಳಿಗ್ಗೆಯಿಂದ ಕಡತಗಳ ಪರಿಶೀಲನೆ, ಮನೆಯ ತಪಾಸಣೆ ಮಾಡುತ್ತಿದೆ. ಬೆಳಿಗ್ಗೆ ಸುಮಾರು ₹12.50 ಲಕ್ಷ ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾಗಿದ್ದವು. ಈಗ ಸೂಟ್‌ ಕೇಸ್‌ನಲ್ಲಿ ₹50 ಸಾವಿರದಿಂದ ₹1 ಲಕ್ಷ ಮೌಲ್ಯದ ವರೆಗಿನ ಕ್ಯಾಸಿನೊ ಕಾಯಿನ್‌ಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

ಸೂಟ್‌ ಕೇಸ್‌ನಲ್ಲಿ ನೀಟಾಗಿ ಜೋಡಿಸಿ ಇಟ್ಟಿರುವ ಕ್ಯಾಸಿನೊ ಕಾಯಿನ್‌ಗಳ ಮೌಲ್ಯವನ್ನು ಲೆಕ್ಕಹಾಕಲಾಗುತ್ತಿದೆ. ದಾಖಲೆಗಳ ತಪಾಸಣೆಯ ವೇಳೆ ಎರಡು ಹುಲಿ ಉಗುರು ಸಹ ಸಿಕ್ಕಿವೆ. ಹುಲಿ ಉಗುರಿನ ಸತ್ಯಾಸತ್ಯತೆ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಸಿನೊ ಕಾಯಿನ್‌ಗಳ ಸೂಟ್‌ ಕೇಸ್

ಕ್ಯಾಸಿನೊ ಕಾಯಿನ್‌ಗಳ ಸೂಟ್‌ ಕೇಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT