ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂದರ್ಗಿ- ಬಳ್ಳೂರ್ಗಿ ರಸ್ತೆ ದುರಸ್ತಿಗೆ ಒತ್ತಾಯ

Published 16 ಜೂನ್ 2024, 15:32 IST
Last Updated 16 ಜೂನ್ 2024, 15:32 IST
ಅಕ್ಷರ ಗಾತ್ರ

ಅಫಜಲಪುರ: ‘ಸುಮಾರು 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನಂದರ್ಗಿ- ಬಳ್ಳೂರ್ಗಿ ಗ್ರಾಮದ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆಯವರು ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶರಣಬಸಪ್ಪ ಬಿರಾದಾರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತರಾವ್ ಚಿತ್ತಪೂರ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡರುವ ಅವರು, ‘ಈ ರಸ್ತೆಯನ್ನು ಈ ಹಿಂದೆ ದುರಸ್ತಿ ಮಾಡಲಾಗಿತ್ತು. ಈಗ ಹಾಳಾಗಿದೆ. ಬೃಹತ್ ವಾಹನಗಳಲ್ಲಿ ಈ ಭಾಗದಿಂದ ಹೆಚ್ಚು ಗರಸು ತೆಗೆದುಕೊಂಡು ಹೋಗುವುದರಿಂದ ರಸ್ತೆ ಹಾಳಾಗುತ್ತಿದೆ. ಹೆಚ್ಚಿನ ಅನುದಾನ ನೀಡಿ ರಸ್ತೆ ದುರಸ್ತಿ ಮಾಡಬೇಕು’ ಎಂದು ಅವರು ತಿಳಿಸಿದರು.

ಬೈಲಪ್ಪ ಗೌರ.
ಬೈಲಪ್ಪ ಗೌರ.

ನಂದರ್ಗಿ ಗ್ರಾಮದ ಮುಖಂಡರಾದ ಕನ್ನಡ ಪರ ಹೋರಾಟಗಾರ ಬೈಲಪ್ಪ ಗೌರ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರಾದ ರಾಜ ಅಹ್ಮದ್ ಮುಜಾವರ್, ಮಾಜಿ ಸದಸ್ಯ ಸಂತೋಷ್ ದೊಡ್ಡಮನಿ ಮಾಹಿತಿ ನೀಡಿ, ‘ಈ ರಸ್ತೆ ದುರಸ್ತಿಯಾದರೆ ಸಾಕಷ್ಟು ಗ್ರಾಮಗಳಿಗೆ ಅನುಕೂಲವಾಗುತ್ತದೆ. ತಾತ್ಕಾಲಿಕವಾಗಿಯಾದರೂ ಗುಂಡಿಗಳನ್ನು ಮುಚ್ಚಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT