ಸೋಮವಾರ, ಆಗಸ್ಟ್ 15, 2022
22 °C

ಚಿಂಚೋಳಿ: ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ‌ ಶ್ರೀನಗರ ಪೆದ್ದಾ ತಾಂಡಾದ ಹೊರವಲಯದ  ಕಾಡಿನಲ್ಲಿ ಶನಿವಾರ ಹರಿದುಬಿದ್ದ ವಿದ್ಯುತ್ ತಂತಿ ತಗಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಂಡಾದ ನಿವಾಸಿ ಸೀತಾಬಾಯಿ ಲಷ್ಕರ ಚವ್ಹಾಣ (48) ಮೃತಪಟ್ಟವರು.

ಆಡು ಮೇಯಿಸಲು ಕಾಡಿಗೆ ಹೋದಾಗ ಘಟನೆ ನಡೆದಿದೆ. ಗಿಡಗಳ ಮಧ್ಯೆ ಹರಿದುಬಿದ್ದಿದ್ದ ವಿದ್ಯುತ್ ತಂತಿ ಗಮನಿಸದೇ ಅದೇ ಮಾರ್ಗದಲ್ಲಿ ದಾಟುವಾಗ ಕುತ್ತಿಗೆ ಭಾಗಕ್ಕೆ ತಂತಿ ತಾಗಿಕೊಂಡಿದೆ. ಮಹಿಳೆಯ ಕುತ್ತಿಗೆ ಹಾಗೂ ಬೆನ್ನಿನ ಭಾಗ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಪತಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಕುಂಚಾವರಂ ಪೂಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು