ಸೋಮವಾರ, ಜೂನ್ 21, 2021
27 °C

ಶಹಾಬಾದ್: ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿ ಜಾತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್‌: ‘ಸಂತ ಜೇಮಸಿಂಗ ಮಹಾರಾಜರು ಬಂಜಾರಾ ಸಮಾಜಕ್ಕೆ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಅವಶ್ಯಕತೆ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಸೋಮವಾರ ಹೇಳಿದರು.

ಅವರು ನಗರದ ಸಮೀಪದ ಮುಗುಳನಾಗಾವಿಯ ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿ 29ನೇ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಿ.ಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ‘ಕಾಯಕದ ಮೇಲೆ ವಿಶ್ವಾಸವಿಟ್ಟ ಬಂಜಾರಾ ಸಮಾಜಕ್ಕೆ ಒಳ್ಳೆಯ ನಾಯಕರು, ಒಳ್ಳೆಯ ಮಠಾಧೀಶರು ಸಿಗುತ್ತಿದ್ದಾರೆ’ ಎಂದರು.

ಒಂದು ತಿಂಗಳ ಮೌನಾನುಷ್ಠಾನದ ನಂತರ ಮೌನ ಮುರಿದು ಆಶೀರ್ವಚನ ನೀಡಿದ ಜೇಮಸಿಂಗ ಮಹಾರಾಜರು, ‘ಶ್ರೀ ಗುರುವಿನ ಕೃಪೆಯಿಂದ ಪ್ರಸಕ್ತ ಸಾಲಿನಲ್ಲಿ ಒಳ್ಳೆ ಬೆಳೆ ಬಂದು ರೈತರಿಗೆ ಅನುಕೂಲ ಆಗಲಿದೆ’ ಎಂದರು.

ಬಳಿರಾಮ ಮಹಾರಾಜ ಮಾತನಾಡಿದರು. ವೇದಿಕೆಯಲ್ಲಿ ಗಣಪತಿ ಮಹಾರಾಜ, ಲಚ್ಚು ಮಹಾರಾಜ, ಕಳಾವತಿ ದೇವಿ, ಸೈಯದ್ ಇಕ್ಬಾಲ್ ಅಲಿಸಾಹೇಬ್ ಉಪಸ್ಥಿತರಿದ್ದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ರಾಮಚಂದ್ರ ಜಾಧವ, ವಿಠಲ ಜಾಧವ, ಸುಭಾಷ ರಾಠೋಡ, ಶಂಕರ ಚವ್ಹಾಣ, ಜ್ಯೋತಿ ಬೆಂಗಳೂರ ಮಾತನಾಡಿದರು.

ನಾಮದೇವ ರಾಠೋಡ ಸ್ವಾಗತಿಸಿದರು. ಪುರಾಣಿಕರಾದ ಶಿವುಶಂಕರ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಟೆಂಗಳಿ ಚಂದ್ರಕಾಂತ ನಿರಗುಡಿ ತಬಲಾ ಸಾಥ್‌ ನೀಡಿದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ನಿರೂಪಿಸಿದರು.

ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು ಬೆಳಿಗ್ಗೆ ಜೇಮಸಿಂಗ ಮಹಾರಾಜರು ಅಗ್ನಿ ತುಳಿದು, ಧರ್ಮಸಭೆಯಲ್ಲಿ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು