ಗುರುವಾರ , ಅಕ್ಟೋಬರ್ 22, 2020
21 °C

ಯುವಕನ ಬರ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಎಂ.ಜಿ. ರಸ್ತೆಯಲ್ಲಿರುವ ಫುಡ್‌ಝೋನ್ ಹತ್ತಿರ ಶನಿವಾರ ನಸುಕಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಯುವಕನ ಸವ ಪತ್ತೆಯಾಗಿದೆ.

ಇಲ್ಲಿನ ನಯಾ ಮೊಹಲ್ಲಾದ ನಿವಾಸಿ ಗುಲಾಮ್‌ ದಸ್ತಗೀರ (25) ಕೊಲೆಯಾದವರು. ನಸುಕಿನ 5.30ರ ಸುಮಾರಿಗೆ ವಾಯುವಿಹಾರಿಗಳಿಗೆ ಕಟ್ಟಡವೊಂದರ ಮುಂದೆ ಶವ ಬಿದ್ದಿರುವುದು ಕಂಡಿದೆ. ಇದನ್ನು ಅವರು ಕಟ್ಟಡದ ವಾಚಮನ್‌ಗೆ ತಿಳಿಸಿದ್ದಾರೆ. ವಾಚ್‌ಮನ್ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು.

‘ಕೊಲೆಯಾದ ಯುವಕನ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ. ಪರಿಚಯದವರು ಗುರುತು ಪತ್ತೆ ಮಾಡಿದ್ದಾರೆ. ಬೇರೆ ಕಡೆ ಹತ್ಯೆ ಮಾಡಿ, ಶವವನ್ನು ಇಲ್ಲಿಗೆ ತಂದು ಬಿಸಾಡಿ ಹೋಗಿರಬಹುದು. ಅಂದಾಜು ಶುಕ್ರವಾರ ರಾತ್ರಿ 11ರ ನಂತರ ಕೊಲೆ ನಡೆದಿರುವ ಸಾಧ್ಯತೆ ಇದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ’ ಎಂದು ಪೊಲೀಸರು ಶಂಕಿಸಿದ್ದಾರೆ.

ಎಂ.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು