ಶುಕ್ರವಾರ, ಮೇ 14, 2021
32 °C
ಮರೆನಾಡ್ ಶೂಟರ್ಸ್ ಕ್ಲಬ್‌ನಿಂದ ತೆಂಗಿನಕಾಯಿಗೆ ಗುಂಡು ಹೊಡೆವ ಸ್ಪರ್ಧೆ

ಶೂಟಿಂಗ್: 200 ಸ್ಪರ್ಧಿಗಳು ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಮರೆನಾಡ್ ಶೂಟರ್ಸ್ ಕ್ಲಬ್ ಆಶ್ರಯದಲ್ಲಿ ಬಿರುನಾಣಿಯ ಮರೆನಾಡ್ ಪ್ರೌಢಶಾಲಾ ಮೈದಾನದಲ್ಲಿ ಸೋಮವಾರ ನಡೆದ 12 ಬೋರ್ ಮತ್ತು ಪಾಯಿಂಟ್ 22 ವಿಭಾಗದ ಮುಕ್ತ ಶೂಟಿಂಗ್ (ತೆಂಗಿನ ಕಾಯಿಗೆ ಗುಂಡು ಹೊಡೆಯುವ) ಸ್ಪರ್ಧೆಯು ಮನ ರಂಜಿಸಿತು.

ಮಂಗಳೂರು ಬಜ್ಪೆ ಸಿಮನ್ಸ್ ಗನ್‌ಹೌಸ್‌ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯನ್ನು ಬಿರುನಾಣಿಯ ಚೇರಂಡ ಪಾಪು ಕಾರ್ಯಪ್ಪ ಅವರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 200ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಪಾಯಿಂಟ್ 22 ವಿಭಾಗದಲ್ಲಿ ಸುಂಟಿಕೊಪ್ಪ ಅಂದಗೋವೆ ಗ್ರಾಮದ ಕೇಚೀರ ಶಮನ್ ಬೆಳ್ಯಪ್ಪ, ಪರಕಟಕೇರಿ ಗ್ರಾಮದ ಕಾಳಿಮಾಡ ಶರತ್ಮುತ್ತಪ್ಪ, ಮುಕ್ಕೋಡ್ಲು ಗ್ರಾಮದ ಕನ್ನಿಕಂಡ ಶ್ಯಾಮ್ ಸುಬ್ಬಯ್ಯ ಅವರು ಕ್ರಮವಾಗಿ ಮೊದಲ ಮೂರು ಸ್ಥಾನ
ಪಡೆದರು.

ಇವರಿಗೆ ಕ್ರಮವಾಗಿ ₹ 15 ಸಾವಿರ, ₹ 12 ಸಾವಿರ ಮತ್ತು ₹ 10 ಸಾವಿರ ನಗದು ಟ್ರೋಫಿ ಮತ್ತು ತಲಾ ಒಂದು ಗ್ರಾಂ. ಚಿನ್ನದ ನಾಣ್ಯ ಪ್ರಶಸ್ತಿ ಪತ್ರ ವಿತರಿಸಲಾಯಿತು.

12 ಬೋರ್ ವಿಭಾಗದಲ್ಲಿ ಪರಕಟಕೇರಿಯ ನೆಲ್ಲೀರ ರಾಕೇಶ್, ನಾಪೋಕ್ಲುವಿನ ಅಜ್ಜೇಟ್ಟಿರ ಗೌತಮ್ಮಂದಣ್ಣ ಮತ್ತು ಟಿ.ಶೆಟ್ಟಿಗೇರಿಯ ಮಚ್ಚಮಾಡ ಶ್ಯಾಮ್ ಮೊದಲ ಮೂರು ಸ್ಥಾನ ಪಡೆದು,  ಕ್ರಮವಾಗಿ ₹ 10 ಸಾವಿರ, ₹ 7 ಸಾವಿರ ಮತ್ತು ₹ 5 ಸಾವಿರ ನಗದು, ಟ್ರೋಫಿ, ತಲಾ ಒಂದು ಗ್ರಾಂ. ಚಿನ್ನದ ನಾಣ್ಯದೊಂದಿಗೆ ಪ್ರಶಸ್ತಿ ಪತ್ರ ತಮ್ಮದಾಗಿಸಿಕೊಂಡರು.

ಮರೆನಾಡ್ ಶೂಟರ್ಸ್ ಕ್ಲಬ್‌ನ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾರ್ಯದರ್ಶಿ ನೆಲ್ಲೀರ ಧನು, ಖಜಾಂಚಿ ಕಳ್ಳಂಗಡ ನವೀನ್ ಚಂಗಪ್ಪ, ಸದಸ್ಯರಾದ ಚೋನಿರ ಸಜನ್ ಉತ್ತಪ್ಪ, ಚೋನಿರ ಸೋಮಣ್ಣ, ಬಲ್ಯಮೀದೇರಿರ ಶರೀನ್ ಬೆಳ್ಯಪ್ಪ, ಕಾಯಪಂಡ ಮೋಹನ್, ಕುಪ್ಪುಡಿರ ಪ್ರಖ್ಯಾತ್ ಚಿಣ್ಣಪ್ಪ, ಕುಪ್ಪಣಮಾಡ ಮಂಜು, ನೆಲ್ಲೀರ ರಾಕೇಶ್, ಕಾಳಿಮಾಡ ಶರತ್ ಮುತ್ತಪ್ಪ, ಕರ್ತಮಾಡ ಸುಜನ್, ಚೇರಂಡ ಪಾಪುಕಾರ್ಯಪ್ಪ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು