ನಾಪೋಕ್ಲು: ಸಮೀಪದ ಹಳೆ ತಾಲ್ಲೂಕಿನ ನಾಡು ಭಗವತಿ ದೇವಾಲಯ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, ನವೀಕರಣಕ್ಕೆ ಸಜ್ಜಾಗಿದೆ.

ದೇವಾಲಯದ ಆಡಳಿತ ಮಂಡಳಿ ದೇವಾಲಯದ ನವೀಕರಣಕ್ಕೆ ಮುಂದಾಗಿದ್ದು, ₹ 1.60 ಕೋಟಿ ವೆಚ್ಚದಲ್ಲಿ ದೇವಾಲಯವನ್ನು ನವೀಕರಿಸಲು ಸಿದ್ಧತೆ ನಡೆದಿದೆ. ಗರ್ಭಗುಡಿ ಹೊರತುಪಡಿಸಿ ಸುತ್ತಲಿನ ಪೌಳಿಯನ್ನು ಕೆಡವಲಾಗಿದೆ. ಪೌಳಿಯನ್ನು ಶಿಲಾಕಲ್ಲಿನಲ್ಲಿ ನಿರ್ಮಿಸಲು ಹಾಗೂ ಚಾವಣಿಗೆ ತಾಮ್ರದ ಹೊದಿಕೆ ಹಾಸಲು ನಿರ್ಧರಿಸಲಾಗಿದೆ. ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ.

ಎರಡು ವರ್ಷಗಳ ಹಿಂದೆ ಪೌಳಿಯ ಸುತ್ತ ಶಿಥಿಲಗೊಂಡಿರುವುದನ್ನು ತಂತ್ರಿಗಳು ತಿಳಿಸಿದ್ದು ಪುನರ್ ನಿರ್ಮಾಣಕ್ಕೆ ಹಾಗೂ ಮಹಾ ಗಣಪತಿ ಗುಡಿಯ ನವೀಕರಣಕ್ಕೆ ಸೂಚಿಸಿದ್ದರು. ಈಗಿರುವ ಪೌಳಿಯನ್ನು ತೆಗೆದು ಶಿಲಾಕಲ್ಲಿನಲ್ಲಿ ನಿರ್ಮಿಸಿ ಚಾವಣಿಗೆ ತಾಮ್ರದ ಹೊದಿಕೆ ಹಾಸಿ ಹೊಸದಾಗಿ ನಿರ್ಮಿಸುವಂತೆ ಆಡಳಿತ ಮಂಡಳಿ ತೀರ್ಮಾನಿಸಿದ್ದು, ಕೆಲಸ ಆರಂಭಿಸಲಾಗಿದೆ.

ಸಾವಿರ ವರ್ಷಗಳ ಇತಿಹಾಸ:

ನಾಡು ಭಗವತಿ ದೇವಾಲಯವು ಒಂದು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಆ ಕಾಲದಲ್ಲಿ ರಾಜವಂಶಸ್ಥರು ಹಾಗೂ ಊರಿನ ಪೂರ್ವಿಕರು ಅಷ್ಟ ಬಂದ ಬ್ರಹ್ಮ ಕಳಸ ಮಾಡಿ ದೇವಾಲಯವನ್ನು ಸ್ಥಾಪನೆ ಮಾಡಿದ ಇತಿಹಾಸ ಇದೆ.

ಭಕ್ತರ ನೆರವಿನೊಂದಿಗೆ ದೇವಾಲಯ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇವಾಲಯದ ಅಂಗಳಕ್ಕೆ ಚಪ್ಪಡಿ ಹಾಸಿದ್ದು, ಹೊರಾಂಗಣಕ್ಕೆ ಕಾಂಕ್ರೀಟ್ ಅಂಗಳ ಮತ್ತು ತಡೆಗೋಡೆ ನಿರ್ಮಾಣ ದೇವಾಲಯದ ಬಲಭಾಗದಲ್ಲಿ ಸಮುದಾಯ ಭವನ, ಎಡ ಭಾಗದಲ್ಲಿ ಊಟದ ಭವನವನ್ನು ಕಾಂಕ್ರೀಟ್ ಚಾವಣಿಯೊಂದಿಗೆ ನಿರ್ಮಿಸಲಾಗಿದೆ.

ಸುಸಜ್ಜಿತ ಅಡುಗೆ ಕೋಣೆ, ಅರ್ಚಕರ ವಸತಿ ನಿಲಯ ನಿರ್ಮಿಸಲಾಗಿದೆ. ಸರ್ಕಾರದ ಅನುದಾನದಿಂದ ದೇವಾಲಯದ ಕೆರೆ ಹಾಗೂ ರಸ್ತೆಗಳಿಗೆ ಕಾಂಕ್ರೀಟ್ ಅಳವಡಿಸಲಾಗಿದೆ. ಹೊರಾಂಗಣವನ್ನೂ ಅಭಿವೃದ್ಧಿ ಪಡಿಸಲಾಗಿದೆ. 2015ರಲ್ಲಿ ಶಿಲೆಯನ್ನು ಬಳಸಿ ಗರ್ಭಗುಡಿ, ತೀರ್ಥ ಮಂಟಪಕ್ಕೆ ತಾಮ್ರದ ಹೊದಿಕೆ ಹಾಸಿ, ಕಾಳೆಘಾಟಿನ ತಂತ್ರಿಯವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪಿಸಲಾಗಿದೆ.

ಭಗವತಿ ದೇವಾಲಯವು ಊರಿನವರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಭಗವತಿ ದೇವರ ವಾರ್ಷಿಕ ಹಬ್ಬವು ಮಾರ್ಚ್ನಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬದಂದು ಗ್ರಾಮಸ್ಥರು, ಭಕ್ತರು ದೇವಾಲಯದಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸುತ್ತಾರೆ.

ಎತ್ತುಪೋರಾಟ, ದೇವರ ಮೂರ್ತಿಯನ್ನು ಹೊತ್ತು ನೃತ್ಯ ಬಲಿ ವೀಕ್ಷಿಸಲು ಅಧಿಕ ಸಂಖ್ಯೆಯ ಭಕ್ತರು ದೇವಾಲಯದಲ್ಲಿ ಬಂದು ಸೇರುತ್ತಾರೆ. ಹಲವು ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಭದ್ರಕಾಳಿ, ಭಗವತಿ ದೇವರ ವಾರ್ಷಿಕ ಉತ್ಸವದಲ್ಲಿ ವಿವಿಧ ದೇವರ ಕೋಲ, ನುಚ್ಚುಟೆ, ನರಿಪೂಧ, ಅಂಜಿ ಕೂಟ್ ಮೂರ್ತಿಯಡ ಕೋಲ, ಕಲಿಯಾಟ ಅಜ್ಜಪ್ಪ ದೇವರ ಕೋಲ, ವಿಷ್ಣುಮೂರ್ತಿ ದೇವರ ಕೋಲಗಳು ವಾರ್ಷಿಕ ಉತ್ಸವದ ಪ್ರಮುಖ ಆಕರ್ಷಣೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.