ಗ್ಯಾರಂಟಿ ಸಮಿತಿ ಪ್ರಚಾರ ಸಮಿತಿ ಜಂಟಿಯಾಗಿ ಕೆಲಸ ಮಾಡಿ ಪ್ರತಿ ಮತದಾರರನ್ನು ಭೇಟಿ ಮಾಡುತ್ತೇವೆ
ಟಿ.ಪಿ.ರಮೇಶ್ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ
ಜಿಲ್ಲಾ ತಾಲ್ಲೂಕು ಪಂಚಾಯಿತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಪ್ರಚಾರಕ್ಕೆ ಮುಂದಾಗಬೇಕು. ಪ್ರತಿ ಮತದಾರರಿಗೂ ವಿಚಾರಗಳನ್ನು ಮುಟ್ಟಿಸಬೇಕು
ಎಲ್.ಆರ್.ಲೋಬೊ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ.
‘ಶ್ಯಾಡೊ ಪಿಎಂ ಹೇಳಿದ ಮೇಲೆ ಸಾಕ್ಷ್ಯ ಬೇಕಾ?’
‘ವಿರೋಧ ಪಕ್ಷದ ನಾಯಕನನ್ನು ‘ಶ್ಯಾಡೊ ಪ್ರಧಾನಮಂತ್ರಿ’ ಎಂದು ಕರೆಯಲಾಗುತ್ತದೆ. ಈ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಮತಗಳವು ಆಗಿರುವ ಕುರಿತು ಸುದ್ದಿಗೋಷ್ಠಿ ನಡೆಸಿದ ಬಳಿಕವೂ ಚುನಾವಣಾ ಆಯೋಗಕ್ಕೆ ಸಾಕ್ಷ್ಯ ನೀಡಬೇಕಾ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ಪ್ರಶ್ನಿಸಿದರು. ಆಯೋಗವೂ ಈ ಕುರಿತು ಸ್ವಯಂಪ್ರೇರಿತವಾಗಿ ತನಿಖೆ ನಡೆಸಬೇಕು. ಎಲ್ಲಿ ತಪ್ಪಾಗಿದೆ ಅದನ್ನು ಸರಿಪಡಿಸಬೇಕು ಎಂದರು. ಸಂಸತ್ ಚುನಾವಣೆಯಲ್ಲಿ ಮತ ಹಾಕಿದ 65 ಲಕ್ಷ ಮತದಾರರು ಈ ಬಾರಿ ಬಿಹಾರ ವಿಧಾನಸಭಾ ಚುನಾವಣಾ ಮತದಾರರ ಪಟ್ಟಿಯಲ್ಲಿ ಇಲ್ಲ. ಒಂದೇ ಮನೆಯಲ್ಲಿ 900ಕ್ಕೂ ಅಧಿಕ ಮತದಾರರು ಇದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾದ ಎಂದರು.