ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಬಹುತೇಕ ಸಂಪರ್ಕ ರಸ್ತೆಗಳು ಜಲಾವೃತವಾಗಿದ್ದು ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಹ ತಗ್ಗಿದೆ. ಆದರೆ ಅಲ್ಲಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ.

ಗುಂಡಿ ಬಿದ್ದ ರಸ್ತೆಗಳಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕೆಲವೆಡೆ ರಸ್ತೆ ಗುಂಡಿಗಳಲ್ಲಿ ಡಾಂಬರು ಕಿತ್ತು ಹೋಗಿ ಜಲ್ಲಿ ಕಲ್ಲುಗಳ ರಾಶಿ ಇದೆ. ಮಳೆಯಿಂದಾಗಿ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ನಾಪೋಕ್ಲು- ಭಾಗಮಂಡಲ ರಸ್ತೆಯ ಚೋನಕೆರೆ, ನೆಲಜಿ ಭಾಗಗಳಲ್ಲಿ, ಮಡಿಕೇರಿ -ಭಾಗಮಂಡಲ ರಸ್ತೆಯ ಬೆಟ್ಟಗೇರಿ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಸಂಚಾರಕ್ಕೆ ದುಸ್ತರವಾಗಿದೆ.

ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ, ವಿರಾಜಪೇಟೆ ರಸ್ತೆಯ ಕೈಕಾಡು, ಬಲಮುರಿ ರಸ್ತೆಯ ಎತ್ತುಕಡು, ಚೆರಿಯಪರಂಬು ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ರಸ್ತೆ ಎತ್ತರಿಸಬೇಕಾಗಿದೆ. ಈಚೆಗೆ ಚೆರಿಯಪರಂಬುವಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಬೋಸರಾಜ್ ಪ್ರವಾಹದಿಂದ ರಸ್ತೆ ಸಂಪರ್ಕಕಡಿತಗೊಳ್ಳದಂತಾಗಲು ರಸ್ತೆ ಎತ್ತರಿಸುವ ಬಗ್ಗೆ ಪ್ರಸ್ತಾಪಿಸಿದರು. ಇಲ್ಲಿ ತಗ್ಗು ಪ್ರದೇಶದಲ್ಲಿ ₹1.89 ಲಕ್ಷ ವೆಚ್ಚದಲ್ಲಿ ರಸ್ತೆ ಎತ್ತರಿಸುವ ಬಗ್ಗೆ ಭರವಸೆ ನೀಡಿದ್ದರು. ಅಂತೆಯೇ ನಾಪೋಕ್ಲು ವ್ಯಾಪ್ತಿಯ ಹಲವು ತಗ್ಗು ಪ್ರದೇಶಗಳಲ್ಲಿ ರಸ್ತೆ ಎತ್ತರಿಸುವ ಕಾರ್ಯ ಆಗಬೇಕಿದೆ.

ಗ್ರಾಮೀಣ ಪ್ರದೇಶದ ಹದಗೆಟ್ಟ ರಸ್ತೆಗಳು ಮಳೆಗಾಲದಲ್ಲಿ ಚಾಲಕರಿಗೆ ಸಂಚಾರ ಸಮಸ್ಯೆ ತಂದೊಡ್ಡುತ್ತಿವೆ. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬೇತು ಗ್ರಾಮದಿಂದ ತೋಟಗಾರಿಕಾ ಸಸ್ಯ ಕ್ಷೇತ್ರದ ಬಳಿಯ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿದೆ. ಸದ್ಯಕ್ಕೆ ಚರಂಡಿ ತೆಗೆದು ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಿರುವುದರಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆಯಾಗಿದೆ. ಈ ರಸ್ತೆಯ ಡಾಂಬರೀಕರಣ ಮಾಡಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ನಾಪೋಕ್ಲು ಬಳಿಯ ಬೇತು-ಬಲಮುರಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಕ್ಕಬ್ಬೆ ಹೊಳೆಗೆ ಎತ್ತುಕಡು ಸೇತುವೆ ನಿರ್ಮಾಣವಾದ ಬಳಿಕ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿದೆ. ಪಟ್ಟಣದಿಂದ ಸಾಕಷ್ಟು ವಾಹನಗಳು ಬಲಮುರಿ ಮೂಲಕ ಮೂರ್ನಾಡು ಹಾಗೂ ಪಾರಾಣೆ ಮೂಲಕ ವಿರಾಜಪೇಟೆ ತಲುಪಲು ಈ ಮಾರ್ಗವನ್ನು ಬಳಸುತ್ತಿದ್ದಾರೆ ಈ ರಸ್ತೆಯ ಮಕ್ಕಿ ಶಾಸ್ತಾವು ದೇವಾಲಯದ ಬಳಿಯಿಂದ ಸೇತುವೆಯವರೆಗೆ ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿದೆ. ಸೇತುವೆಯ ಬಳಿ ಕೆಸರುಮಯ ಸ್ಥಳದಲ್ಲಿ ಅನತಿ ದೂರ ಕಾಂಕ್ರಿಟ್ ರಸ್ತೆ ನಿರ್ಮಿಸಿ ಸರಿಪಡಿಸಲಾಗಿದೆ. ಇನ್ನುಳಿದ ಭಾಗದಲ್ಲಿ ಜಲ್ದಿ ಕಲ್ಲುಗಳೆಂದು ಡಾಂಬರು ಇಲ್ಲದೇ ರಸ್ತೆ ಗುಂಡಿಮಯವಾಗಿದೆ. ಈ ರಸ್ತೆಯ ಸ್ವಲ್ಪ ಭಾಗ ತಗ್ಗಿನಲ್ಲಿದ್ದು ರಸ್ತೆಯ ಇಕ್ಕೆಲಗಳು ಗದ್ದೆಗಳಿಂದ ಆವೃತವಾಗಿದೆ. ಇಲ್ಲಿ ರಸ್ತೆಯನ್ನು ಎತ್ತರಿಸಿ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಅಗ್ರಹವಾಗಿದೆ.

ರಸ್ತೆ ಹೊಂಡ: ಪಟ್ಟಣವೂ ಹೊರತಾಗಿಲ್ಲ...

ಪಟ್ಟಣದ ರಸ್ತೆಯೂ ಅಲ್ಲಲ್ಲಿ ದುಸ್ಥಿತಿಯಲ್ಲಿದೆ. ಹಳೆ ತಾಲ್ಲೂಕಿನ ಪೊನ್ನುಮುತ್ತಪ್ಪ ದೇವಾಲಯದ ಬಳಿ ರಸ್ತೆಗುಂಡಿ ಬಿದ್ದಿದೆ. ಅಪ್ಪಚ್ಚ ಕವಿ ರಸ್ತೆಯಲ್ಲೂ ಹೊಂಡಗಳಿವೆ. ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆಯ ಬೆಟ್ಟಗೇರಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿವೆ. ಈ ರಸ್ತೆಯಲ್ಲಿ ಭಾಗಮಂಡಲದತ್ತ ಸಾಗುವವರಿಗೆ ಗುಂಡಿಬಿದ್ದ ರಸ್ತೆ ಕಿರಿಕಿರಿಯನ್ನುಂಟುಮಾಡುತ್ತವೆ. ರಸ್ತೆಯುದ್ದಕ್ಕೂ ಡಾಂಬರು ಕಿತ್ತು ಹೋಗಿದ್ದು ರಸ್ತೆಯಲ್ಲಿ ಜಲ್ಲಿಗಳ ರಾಶಿಯೇ ಇದೆ.ನಡುವೆ ದೊಡ್ಡ ಹೊಂಡವಾಗಿದ್ದು ಬಿದ್ದು ಎದ್ದು ಸಂಚರಿಸುವ ಪರಿಸ್ಥಿತಿ ಇದೆ.ಇಲ್ಲಿ ಶೀಘ್ರ ರಸ್ತೆ ದುರಸ್ಥಿ ಕೈಗೊಳ್ಳಬೇಕು. ಮಳೆಗಾಲದಲ್ಲಿ ನೀರುಸರಾಗವಾಗಿ ಹರಿದುಹೋಗುವಂತೆ ಚರಂಡಿ ನಿರ್ಮಿಸಬೇಕು. ಮಳೆಗಾಲ ಕಳೆಯುವಷ್ಟರಲ್ಲಿ ರಸ್ತೆಹೊಂಡಗಳು ಮತ್ತಷ್ಟು ಹೆಚ್ಚಿ ಸಮಸ್ಯೆ ಉಲ್ಪಣವಾಗಲಿದೆ ಎಂಬುದು ಸ್ಥಳೀಯರು ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.