ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ಪೊಲೀಸರು ಜಿಲ್ಲೆಯ ಹಲವೆಡೆ ಸಭೆಗಳನ್ನು ಗುರುವಾರ ನಡೆಸಿದರು.

ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನೇತೃತ್ವದಲ್ಲಿ ಸಭೆ ನಡೆದರೆ, ವಿವಿಧ ಠಾಣಾ ವ್ಯಾಪ್ತಿಯಲ್ಲೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಭೆಗಳು ನಡೆದವು.

ಜಿಲ್ಲಾ ಕೇಂದ್ರ ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಪೊಲೀಸರು, ಕಂದಾಯ ಇಲಾಖೆ, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ನಿಗಮ, ಕೆಪಿಟಿಸಿಎಲ್, ಗೃಹ ರಕ್ಷಕ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘಟನೆಗಳ ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಈ ಬಾರಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 65 ವರ್ಷಗಳ ಬಳಿಕ ಈ ರೀತಿ ಮಳೆಯಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಅದರಂತೆ, ಈ ವರ್ಷ ಈಗಾಗಲೇ ಗರಿಷ್ಠ ಮಳೆ ಸುರಿದಿದ್ದು, ನದಿ, ತೊರೆ, ತೋಡುಗಳು ತುಂಬಿ ಹರಿಯುತ್ತಿದ್ದು, ಜಲಾಶಯ, ಕೆರೆ, ಹಳ್ಳಗಳು ತುಂಬಿವೆ. ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಮಳೆಯಾಗುವ ಸಂಭವ ಇರುವುದರಿಂದ ತಜ್ಞರ ಸಲಹೆಯಂತೆ ಮುಂಜಾಗ್ರತಾ ಕ್ರಮ ವಹಿಸಬೇಕಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ‘ಪ್ರಕೃತಿ ವಿಕೋಪ ಸಂಭವಿಸಿದಾಗ ಸ್ಥಳೀಯರು ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ವಿಪ್ಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್ ಮಾತನಾಡಿ, ‘ಭೂಮಿಯಲ್ಲಿನ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ನಡೆದಾಗ ಅದನ್ನು ಗಮನಕ್ಕೆ ತರಬೇಕು. ಅನಾಹುಗಳು ನಡೆದಾಗ ಪಂಚಾಯಿತಿ ಮಟ್ಟದಲ್ಲೇ ರಕ್ಷಣಾ ತಂಡವಿದ್ದು, ಅವರು ನೆರವಿಗೆ ಬರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ಎನ್.ಡಿ.ಆರ್.ಎಫ್ ತಂಡ ಸಹ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಕೊಡಗಿನ ಜನತೆ ಯಾವುದಕ್ಕೂ ಭಯಪಡುವುದು ಬೇಡ ಎಂದು ಹೇಳಿದರು.

ಅಗ್ನಿಶಾಮ ದಳದ ಠಾಣಾಧಿಕಾರಿ ಶೋಬಿತ್ ಮಾತನಾಡಿ, ‘ಅಗ್ನಿಶಾಮಕ ಇಲಾಖೆ ಕೂಡ ಈ ಬಾರಿಯ ಮಳೆಗಾಲ ಎದುರಿಸಲು ಸಜ್ಜಾಗಿದೆ. ಎಂತಹುದೇ ತುರ್ತು ಸಂದರ್ಭ ಎದುರಾದಲ್ಲಿ ನಮ್ಮ ಸಿಬ್ಬಂದಿ ನೆರವಿಗೆ ಬರುತ್ತಾರೆ’ ಎಂದು ತಿಳಿಸಿದರು.

ಖಾಸಗಿ ಆಂಬುಲೆನ್ಸ್ ಮಾಲೀಕರು ಮತ್ತು ಚಾಲಕರು, ಸ್ಥಳೀಯ ಸ್ವಯಂಸೇವಕರು, ಸಾರ್ವಜನಿಕರು, ಜೆಸಿಬಿ ಮತ್ತು ಕ್ರೇನ್ ಮಾಲೀಕರು ಮತ್ತು ಚಾಲಕರು, ಜೀಪ್ ಮಾಲೀಕರು ಮತ್ತು ಚಾಲಕರು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೋಡಲ್ ಅಧಿಕಾರಿಗಳು, ಡಿವೈಎಸ್ಪಿಗಳು ಇನ್ಸ್ಪೆಕ್ಟರ್ಗಳು, ಸ್ವಯಂಸೇವಕರು ಭಾಗವಹಿಸಿದ್ದರು.

Highlights - ತುರ್ತು ಸಹಾಯವಾಣಿ-112 ಪೊಲೀಸ್ ನಿಯಂತ್ರಣ ಕಚೇರಿ ಸಂಖ್ಯೆ ದೂ 08272-228330 ಪೊಲೀಸ್ ನಿಯಂತ್ರಣ ಕಚೇರಿ ಸಂಖ್ಯೆ ಮೊ: 9480804900,

ಇತರೆ ಸೂಚನೆಗಳು

* ವಿಪತ್ತು ಉಂಟಾದ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಮಾಡುವ ಸಲುವಾಗಿ ಅವಶ್ಯಕವಿರುವ ಜೆಸಿಬಿ ಕ್ರೇನ್ ಟೋಯಿಂಗ್ ವಾಹನ ವುಡ್ ಕಟ್ಟರ್ 4x4 ಜೀಪ್ ಹಾಗೂ ಬೋಟ್ ತೆಪ್ಪ ಮತ್ತು ಇತರೆ ಸ್ಥಳೀಯ ಸಂಪನ್ಮೂಲಗಳಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು

* ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸ್ವಯಂಸೇವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು

* ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗಾಗಿ ಸ್ವಯಂಸೇವಕರನ್ನು ಈಗಾಗಲೇ ಗುರುತಿಸಿದ್ದು ಅವರ ವಿವರಗಳನ್ನು ಸಂಗ್ರಹಿಸಲಾಗಿದೆ

* ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ದರಾಗಿರುವ ನಿಟ್ಟನಲ್ಲಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ವಯಂಸೇವಕರೊAದಿಗೆ ಠಾಣಾ ಮಟ್ಟದಲ್ಲಿ ಸಭೆಯನ್ನು ನಡೆಸಿ ಸೂಕ್ತ ಸಲಹೆಯನ್ನು ನೀಡುವಂತೆ ಎಲ್ಲಾ ಠಾಣೆಯ ಉಸ್ತುವಾರಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ.

* ವಿಪತ್ತು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಬೇಕು ಮತ್ತು ಆ ಸ್ಥಳಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ವಿವರವನ್ನು ಸಂಗ್ರಹಿಸಬೇಕು. * ವಿಪತ್ತು ಜರುಗಿದ ಸ್ಥಳಗಳಲ್ಲಿನ ನಿವಾಸಿಗಳನ್ನು ಶೀಘ್ರವಾಗಿ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಬೇಕು ಈ ಸ್ಥಳದ ಸಮೀಪದಲ್ಲಿ ವಾಸಿಸುವ ಸಾರ್ವಜನಿಕರನ್ನು ಸಹ ಸ್ಥಳಾಂತರಿಸುವ ಬಗ್ಗೆ ಕ್ರಮಕೈಗೊಳ್ಳಬೇಕು

* ವಿಪತ್ತು ಉಂಟಾಗಿ ಹಾನಿಯಾದ ಸ್ಥಳಗಳ ವೀಕ್ಷಣೆಗೆ ಬರುವ ಸಾರ್ವಜನಿಕರು ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ಅಡ್ಡವಾಗಿ ವಾಹನಗಳನ್ನು ನಿಲ್ಲಿಸಬಾರದು ಹಾಗೂ ಹಾನಿಯಾದ ಸ್ಥಳದ ರಕ್ಷಣೆ ಕಾರ್ಯಕ್ಕಾಗಿ ತೆರಳುವ ಅಧಿಕಾರಿ ಸಿಬ್ಬಂದಿ ಹಾಗೂ ಸ್ವಯಂಸೇವಕರ ವಾಹನಗಳಿಗೆ ತುರ್ತು ಸೇವೆಗಳ ವಾಹನಗಳುತೆರಳಲು ಸಾಧ್ಯವಾಗದಂತೆ ಸಾರ್ವಜನಿಕರು ವಾಹನಗಳನ್ನು ಅಡ್ಡವಾಗಿ ನಿಲ್ಲಿಸಬಾರದು

* ಗುಡ್ಡಕುಸಿತ ಅಥವಾ ಪ್ರವಾಹದಿಂದ ಮನೆ ಹಾನಿಯಾಗಿರುವ ಸಂದರ್ಭದಲ್ಲಿ ಮೊದಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಮತ್ತು ಮಾಹಿತಿಯನ್ನು ನೀಡಬೇಕು * ಗುಡ್ಡಕುಸಿತ ಅಥವಾ ಪ್ರವಾಹದಿಂದ ಮನೆ ಹಾನಿಯಾಗಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಸಾಮಗ್ರಿಗಳು ಹಾಗೂ ಇತರೇ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವ ವೇಳಯಲ್ಲಿ ಜೀವಕ್ಕೆ ಹಾನಿಯುಂಟಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಮೊದಲು ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು

* ವಿಪತ್ತು ಉಂಟಾದ ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಬದಲಿ ಮಾರ್ಗಗಳನ್ನು ಗುರುತಿಸಬೇಕು ವಿದ್ಯುತ್ ತಂತಿಗಳು ತುಂಡಾಗಿರುವ ಸಂದರ್ಭದಲ್ಲಿ ಮನೆಯ ಮೇಲೆ ಮತ್ತು ರಸ್ತೆಯಲ್ಲಿ ಮರಗಳು ಬಿದ್ದಿರುವುದು ಕಂಡುಬಂದಲ್ಲಿ ಮತ್ತು ವಿಪತ್ತಿಗೆ ಸಿಲುಕಿದವರ ರಕ್ಷಣೆಯ ಅವಶ್ಯಕತೆ ಕುರಿತು ಮಾಹಿತಿಯನ್ನು ತುರ್ತು ಸಹಾಯವಾಣಿ-112 ಪೊಲೀಸ್ ನಿಯಂತ್ರಣ ಕಚೇರಿ ಸಂಖ್ಯೆ:08272-228330 9480804900 ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕಚೇರಿಯ ಸಂಖ್ಯೆ: 08272-221077 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕು * ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೋಳ್ಳಲು ಇಚ್ಚೆಯುಳ್ಳವರು ತಮ್ಮ ವಿವರಗಳನ್ನು ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಮೊ: 8277958444ಗೆ ನೇರವಾಗಿ ನೀಡಬೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.