ವಿರಾಜಪೇಟೆ: ಪಟ್ಟಣದಲ್ಲಿನ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳಿ (ಫೆಡರೇಷನ್) ಸಂಸ್ಥೆಯು ನೂತನ ಬ್ರ್ಯಾಂಡ್ ಅಕ್ಕಿಯನ್ನು ಮಾರುಕಟ್ಟೆಗೆ ಈಚೆಗೆ ಬಿಡುಗಡೆಗೊಳಿಸಿತು.

ಪಟ್ಟಣದ ದಖ್ಖನಿ ಮೊಹಾಲ್ಲದಲ್ಲಿನ ಫೆಡರೇಷನ್ ಸಂಸ್ಥೆಗೆ ಸೇರಿದ ಅಕ್ಕಿ ಗಿರಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವಾಟೇರಿರ ಪಿ. ಬೋಪಣ್ಣ ಅವರು ಸಂಸ್ಥೆಯ ಬ್ರ್ಯಾಂಡ್ ಬಿಡುಗಡೆಗೊಳಿಸಿ ಮಾತನಾಡಿದರು. 10 ಹಾಗೂ 25 ಕೆ.ಜಿ ತೂಕದ ಚೀಲಗಳಲ್ಲಿ ಸ್ಪರ್ಧಾತ್ಮಕ ದರದಲ್ಲಿ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸಂಸ್ಥೆಯು ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಆರಂಭೀಸಿ ಗ್ರಾಹಕರಿಗೆ ತನ್ನ ಸೇವೆ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡುವ ಕೇಂದ್ರ ಸ್ಥಾಪಿಸಿ, ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭ ಫೆಡರೇಷನ್ ಉಪಾಧ್ಯಕ್ಷ ತಾತಂಡ ಎಂ.ಕಾವೇರಪ್ಪ, ನಿರ್ದೇಶಕ ಕಂಜಿತಂಡ ಮಂದಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಮುಲ್ಲೇಂಗಡ ಎಂ ಕುಟ್ಟಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮಾಚಿಮಂಡ ಬಿ.ವಸಂತ, ಕುಂಬೇರ ಮನು ಕುಮಾರ್, ಮೂಕೊಂಡ ಪಿ.ಸುಬ್ರಮಣಿ, ಕೆ.ಆರ್. ವಿನೋದ್, ಅಂಜಪರವಂಡ ಎಂ. ಮಂದಣ್ಣ, ಕೂತಂಡ ಸಚಿನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ, ಪುಟ್ಟಿಚಂಡ ವೀಣಾ ಮಹೇಶ್, ಎಚ್.ಎನ್. ಶೇಖರ್ ಮತ್ತು ಎಚ್.ಎ. ಆನಂದ ಹಾಗೂ ವ್ಯವಸ್ಥಾಪಕರಾದ ಕೆ.ಎಂ. ಚಂದ್ರಕಾಂತ್, ಮುಖೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.