ಗೋಣಿಕೊಪ್ಪಲು: ಅರಣ್ಯಶಾಸ್ತ್ರ ಅಧ್ಯಯನ ಪದವೀಧರರಿಗೆ ಅರಣ್ಯ ಇಲಾಖೆಯ ಹುದ್ದೆಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿ 15 ದಿನಗಳಿಂದ ನಡೆಸುತ್ತಿರುವ ಪೊನ್ನಂಪೇಟೆ ಅರಣ್ಯಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ಶನಿವಾರವೂ ಮುಂದುವರಿಯಿತು.

ತರಗತಿ ಬಹಿಷ್ಕರಿಸಿ ವಿದ್ಯಾಲಯದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ವಿದ್ಯಾರ್ಥಿಗಳು ‘ನಮಗೆ ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಇವರ ಹೋರಾಟವನ್ನೂ ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಶಾಸಕ ಎ.ಎಸ್.ಪೊನ್ನಣ್ಣ ಅವರೂ ಕೂಡ ವಿದ್ಯಾರ್ಥಿಗಳ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿಲ್ಲ. ಹೀಗಾಗಿ ಅರಣ್ಯ ಮಹಾವಿದ್ಯಾಲಯದ ಹೋರಾಟ ಅರಣ್ಯ ರೋದನವಾಗಿಯೇ ಉಳಿದಿದೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ನಾಯಕಿ ಪಾವನ, ಅರಣ್ಯಶಾಸ್ತ್ರ ಅಧ್ಯಯನವನ್ನು ವೃತ್ತಿಪರ ಕೋರ್ಸ್ ಎಂದು ಹೇಳಲಾಗುತ್ತಿದೆ. ಆದರೆ ಇದರ ಪದವೀಧರರಿಗೆ ನ್ಯಾಯಯುತವಾಗಿ ಸಿಗಬೇಕಾದ ಹುದ್ದೆಯನ್ನು ಕಿತ್ತುಕೊಳ್ಳಲಾಗಿದೆ. ಬೇರೆಯವರ ಲಾಬಿಗೆ ಮಣಿದು ಇತರ ಬಿಎಸ್ಸಿ ಪದವೀಧರರಿಗೆ ಅರಣ್ಯ ಇಲಾಖೆ ಹುದ್ದೆಗಳನ್ನು ನೀಡಲಾಗುತ್ತಿದೆ. ಇದರಿಂದ ನಿಜವಾದ ಅರಣ್ಯಶಾಸ್ತ್ರ ಪದವೀಧರರಿಗೆ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ ಸ್ಥಳೀಯ ಶಾಸಕರ ಮೂಲಕ ಸರ್ಕಾರದ ಗಮನ ಸೆಳೆದರೂ ಕೂಡ ಯಾವುದೇ ಫಲ ಸಿಗುತ್ತಿಲ್ಲ. ಅವರಿಂದ ನೋಡೋಣ, ಮಾಡೋಣ ಎಂಬ ಉತ್ತರ ಮಾತ್ರ ಬರುತ್ತಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಇದೀಗ ಆರಂಭಿಸಿರುವ ಅನಿರ್ದಾಷ್ಟಾವಧಿ ಸತ್ಯಾಗ್ರಹ ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಹೇಳಿದರು.

ಸಾವಿನ ಮನೆಯಲ್ಲಿ ಎಳನೀರು ಪೂಜಿಸಿ ಗಂಗಾಸ್ಥಾನಕ್ಕೆ ಬಿಡುವಂತೆ ಧರಣಿ ನಿರತ ವಿದ್ಯಾರ್ಥಿಗಳು ಎಳನೀರು ಬುರುಡೆಯನ್ನು ಹಿಡಿದು ಅದರಲ್ಲಿ ಗಂಧದ ಕಡ್ಡಿ ಹೆಚ್ಚಿ ಸಾವಿನ ಸಂಕೇತವಾಗಿ ಅಣುಕು ಪ್ರದರ್ಶನ ಮಾಡಿದರು. ಎಲ್ಲರೂ ಸಂಭ್ರಮದಿಂದ ಪಟಾಕಿ ಸಿಡಿಸಿ ದೀಪ ಹಚ್ಚಿ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸುತ್ತಿದ್ದರೆ ನಾವು ಮಾತ್ರ ಬದುಕಿನ ಭದ್ರತೆಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.