ಏಕಗವಾಕ್ಷಿ ವ್ಯವಸ್ಥೆ ಬೇಕು ಗಣೇಶೋತ್ಸವಕ್ಕೆ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಬೇಕಿದೆ. ಕಚೇರಿಯಿಂದ ಕಚೇರಿಗೆ ಹೋಗಬೇಕಾದ ಸ್ಥಿತಿ ಇದೆ. ಇನ್ನು ಮಕ್ಕಳ ಪಾಡಂತೂ ಹೇಳತೀರದಾಗಿದೆ. ಶೀಘ್ರದಲ್ಲಿ ಒಂದೇ ಕಡೆ ಅನುಮತಿ ನೀಡುವ ವ್ಯವಸ್ಥೆ ತನ್ನಿ
ಚೇತನ್ ಶಾಂತಿನಿಕೇತನ ಯುವಕ ಸಂಘ.
ನಿಯಮ ಸರಳೀಕರಣ ಮಾಡಲಾಗಿದೆ ಪೊಲೀಸ್ ಅನುಮತಿ ಮಾತ್ರ ಕಡ್ಡಾಯವಾಗಿದೆ. ಚಿಕ್ಕದಾಗಿ ಸರಳವಾಗಿ ಗಣೇಶ ಕೂರಿಸುವವರು ಪೊಲೀಸ್ ಅನುಮತಿ ತೆಗೆದಕೊಂಡರೆ ಸಾಕು. ಆದರೆ ದೊಡ್ಡ ಮಟ್ಟದ ಗಣೇಶೋತ್ಸವ ಮಾಡುವವರು ಮಾತ್ರ ವಿವಿಧ ಇಲಾಖೆಗಳ ಅನುಮತಿ ಪಡೆಬೇಕು. ದೊಡ್ಡಮಟ್ಟದ ಗಣೇಶೋತ್ಸವ ಮಾಡುವವರ ಸಂಖ್ಯೆ ಕಡಿಮೆ ಇದೆ