ಮಡಿಕೇರಿ ನಗರಸಭೆಯ ತುರ್ತು ಕೌನ್ಸಿಲ್ ಸಭೆಯಲ್ಲಿ ಹಿರಿಯ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿದರು
‘ಯೋಜನೆಗೆ ಎಲ್ಲರ ವಿರೋಧ’ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಬಹುತೇಕ ಮಂದಿಯ ವಿರೋಧ ಇದೆ. ಹಿರಿಯ ನಾಯಕರಾದ ಎಂ.ಸಿ.ನಾಣಯ್ಯ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಸವಾದಿಗಳು ಮಾತ್ರವಲ್ಲ ಸ್ಥಳೀಯರ ಪ್ರಬಲ ವಿರೋಧ ಇದೆ.
ಮಹೇಶ್ ಜೈನಿ ನಗರಸಭೆ ಉಪಾಧ್ಯಕ್ಷ.
ಮಾಹಿತಿ ಇಲ್ಲದೇ ಸಭೆ ಕರೆದಿದ್ದು ಏಕೆ? ಸರ್ಕಾರದ ಯೋಜನೆಯನ್ನು ಸರ್ಕಾರದ ಭಾಗವಾದ ನಗರಸಭೆ ವಿರೋಧಿಸುವುದು ಸರಿಯಲ್ಲ. ವಿರೋಧಕ್ಕಾಗಿಯೇ ಈ ಸಭೆ ಕರೆಯಲಾಗಿದೆ. ಹಾಗಾದರೆ ಮಡಿಕೇರಿಯಲ್ಲಿ ಅಭಿವೃದ್ಧಿ ಬೇಡವೇ? ಯೋಜನೆಯ ಬಗ್ಗೆ ಮಾಹಿತಿ ಇಲ್ಲದ ಮೇಲೆ ತುರ್ತು ಸಭೆಯನ್ನು ಕರೆದಿದ್ದಾರೂ ಏಕೆ?
ಬಿ.ವೈ.ರಾಜೇಶ್ ಕಾಂಗ್ರೆಸ್ ಸದಸ್ಯ.
‘ಹಿಂದೆಯೂ ಮಾಹಿತಿ ನೀಡಿರಲಿಲ್ಲ’ ಹಿಂದೆ ರಾಜಾಸೀಟ್ ಉದ್ಯಾನದಲ್ಲಿ ಜಿಪ್‌ಲೈನ್‌ನಂತಹ ಸಾಹಸ ಕ್ರೀಡೆಗಳು ಆರಂಭವಾದಾಗಲೂ ನಗರಸಭೆಗೆ ಮಾಹಿತಿ ನೀಡಿರಲಿಲ್ಲ. ಈಗಲೂ ನೀಡಿಲ್ಲ. ಈ ಯೋಜನೆಯ ಪರವಾಗಿ ಒಂದು ಪಕ್ಷ ವಿರೋಧವಾಗಿ ಮತ್ತೊಂದು ಪಕ್ಷ ಇದೆ ಇದು ಸರಿಪ್‌ಲೈನ್ ಸಹ ಬೇಡ. ಈ ಕುರಿತು ದೃಢವಾದ ನಿರ್ಣಯ ಮಾಡಿ.
ಅಮಿನ್ ಮೊಹಿಸಿನ್ ಎಸ್‌ಡಿಪಿಐ ಸದಸ್ಯ
ವಾಹನ ನಿಲುಗಡೆ ಸಮಸ್ಯೆ ಗಾಜಿನ ಸೇತುವೆಯಿಂದ ರಾಜಾಸೀಟ್‌ನಲ್ಲಿ ವಾಹನ ನಿಲುಗಡೆ ಸಮಸ್ಯೆ ಉಲ್ಬಣಿಸಲಿದೆ. ಈಗಲೇ ಸ್ಥಳೀಯರು ಅತ್ತ ಹೋಗಲೂ ಆಗುತ್ತಿಲ್ಲ. ಇನ್ನು ಗಾಜಿನ ಸೇತುವೆ ನಿರ್ಮಿಸಿದರೆ ಆ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗುತ್ತದೆ.
ಉಮೇಶ್ ಸುಬ್ರಮಣಿ ಬಿಜೆಪಿ ಸದಸ್ಯ
ಬೇರೆಡೆ ಗಾಜಿನ ಸೇತುವೆ ನಿರ್ಮಿಸಿ ಗಾಜಿನ ಸೇತುವೆ ನಿರ್ಮಿಸಲೇ ಬೇಕೇಂದಿದ್ದರೆ ನಗರದ ಬೇರೆ ಪ್ರದೇಶಗಳಲ್ಲಿ ನಿರ್ಮಿಸಿ. ಯಾವುದೇ ಕಾರಣಕ್ಕೂ ರಾಜಾಸೀಟ್‌ನಲ್ಲಿ ಬೇಡ. ಇಂತಹದ್ದೊಂದು ಸೂಕ್ಷ್ಮ ಮತ್ತು ದೊಡ್ಡ ಯೋಜನೆ ತರುವಾಗ ಜಿಲ್ಲಾಧಿಕಾರಿ ನಗರದ ಪ್ರಥಮ ಪ್ರಜೆಗೆ ಮಾಹಿತಿ ಕೊಡದಿರುವುದು ಸರಿಯಲ್ಲ.